Monday, November 3, 2025
Google search engine

Homeಆರೋಗ್ಯಸಂಭ್ರಮದ ಜೊತೆ ಮುನ್ನೆಚ್ಚರಿಕೆಯೂ ಇರಲಿ; ಸುರಕ್ಷಿತ ದೀಪಾವಳಿ-ಬೆಳಗಾವಿಯ ಡಾ .ಅಂಜಲಿನ್

ಸಂಭ್ರಮದ ಜೊತೆ ಮುನ್ನೆಚ್ಚರಿಕೆಯೂ ಇರಲಿ; ಸುರಕ್ಷಿತ ದೀಪಾವಳಿ-ಬೆಳಗಾವಿಯ ಡಾ .ಅಂಜಲಿನ್

ವರದಿ :ಸ್ಟೀಫನ್ ಜೇಮ್ಸ್

ದೀಪಾವಳಿ ಬೆಳಕಿನ ಹಬ್ಬ. ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ದೀಪಾವಳಿ ಹಬ್ಬವನ್ನು ಆಚರಿಸುವಾಗ ಮುನ್ನೆಚ್ಚರಿಕೆ ವಹಿಸುವುದು ಕೂಡ ಅಷ್ಟೇ ಮುಖ್ಯ. ದೀಪಾವಳಿ ಹಬ್ಬ ಆಚರಿಸುವಾಗ ಪಟಾಕಿ ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣಿಗೆ ಮಾತ್ರವಲ್ಲದೆ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ದೀಪಾವಳಿ ಹಬ್ಬ ಆಚರಿಸುವಾಗ ಪಟಾಕಿ ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣಿಗೆ ಮಾತ್ರವಲ್ಲದೆ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸುರಕ್ಷಿತ ದೀಪಾವಳಿ ಆಚರಣೆಗೆ ಒಂದಿಷ್ಟು ಸಲಹೆ. ಸುರಕ್ಷಿತ ದೀಪಾವಳಿಗಾಗಿ ಜನರು ಯಾವ್ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಹೀಗಿವೆ. ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿರುವುದರಿಂದ ಜನ ಹಸಿರು ಪಟಾಕಿಗಳನ್ನೇ ಖರೀದಿಸಬೇಕು. ಬಹಳಷ್ಟು ಜನ ಮನೆಯ ಕಾಂಪೌಂಡ್‌ ಒಳಗಡೆ ಅಥವಾ ಹೆಚ್ಚು ಜನರು ಇರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಪಟಾಕಿಗಳನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಸಿಡಿಸಬೇಕು. ಮಕ್ಕಳು ಸ್ವತಂತ್ರವಾಗಿ ಪಟಾಕಿಗಳನ್ನು ಸಿಡಿಸಲು ಬಿಡಬೇಡಿ, ಈ ವೇಳೆ ಪಾಲಕರು ಅಥವಾ ಹಿರಿಯರು ಮಕ್ಕಳ ಜೊತೆ ಇರಿ. ದೀಪಾವಳಿ ದೀಪಗಳ ಹಬ್ಬ ಆಗಿರುವುದರಿಂದ ದಹಿಸುವ ವಸ್ತುಗಳನ್ನು ದೀಪಗಳಿಂದ ದೂರವಿಡಿ. ಪಟಾಕಿ ಸಿಡಿಸುವುದು ಶ್ವಾಸಕೋಶದ ಕಾಯಿಲೆಯಿಂದ ಬಳಲುವವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು. ಜೊತೆಗೆ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ದೀಪಾವಳಿ ವೇಳೆ ಏನಾದರೂ ಬೆಂಕಿ ಅವಘಡ ಉಂಟಾದರೆ, ಗಾಯ ಆದ ಜಾಗಕ್ಕೆ ಸುಮಾರು 15 ನಿಮಿಷಗಳ ಕಾಲ ತಂಪಾದ ನೀರನ್ನು ಹಾಕಿ. ಬೆಣ್ಣೆ, ಎಣ್ಣೆ ಅಥವಾ ಇತರೆ ಮನೆಮದ್ದುಗಳನ್ನು ಬಳಸಬೇಡಿ. ಚರ್ಮಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ತೆಗೆಯಬೇಡಿ. ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ. ದೀಪಾವಳಿ ವೇಳೆ ಸಾಮಾನ್ಯವಾಗಿ ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ಜನ ಹಾಗೂ ಮಕ್ಕಳು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅನೇಕರಿಗೆ ಕಣ್ಣಿನ ಗಾಯಗಳು ಆಗಿರುತ್ತವೆ. ಒಂದು ವೇಳೆ ಪಟಾಕಿಯ ಮದ್ದು ಕಣ್ಣಿಗೆ ಬಿದ್ದರೆ, ಕಣ್ಣನ್ನು ತೊಳೆಯಲು ಶುದ್ಧ ನೀರನ್ನು ಬಳಸಬೇಕು. ಆದರೆ, ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜಬಾರದು. ಗಾಯಾಳುಗಳು ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯಬೇಕು. ಒಂದು ವೇಳೆ ಅಲರ್ಜಿಯಿಂದ ಉಸಿರಾಟ ಸಮಸ್ಯೆ ಉಂಟಾದರೆ ವೈದ್ಯರು ಸೂಚಿಸಿರುವ ಇನ್‌ಹೇಲರ್‌ಗಳನ್ನು ಬಳಸಬಹುದು. ಮತ್ತು ಚೆನ್ನಾಗಿ ಗಾಳಿಯಾಡುವ ಕೋಣೆಗೆ ಹೋಗಿ ಅಥವಾ ಉತ್ತಮ ಗಾಳಿಗಾಗಿ ವಾಯು ಶುದ್ಧೀಕಾರಕವನ್ನು ಬಳಸಿ. ಆದರೆ, ಉಸಿರಾಟದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಹಾಯವನ್ನು ಪಡೆಯಿರಿ. ಇನ್ನು, ದೀಪಾವಳಿ ಸಮಯದಲ್ಲಿ, ಪಟಾಕಿಗಳನ್ನು ಸಿಡಿಸುವಾಗ ಬರುವ ಭಾರೀ ಶಬ್ಧಗಳು ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಪಟಾಕಿ ಶಬ್ಧದಿಂದ ಯಾರಿಗಾದರೂ ಸಮಸ್ಯೆಯಾದ್ರೆ ಅವರನ್ನು ನಿಶಬ್ಧ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕುಡಿಯಲು ನೀರು ಕೊಡಿ. ನಂತರ ಅವರ ಒತ್ತಡವನ್ನು ಕಡಿಮೆ ಮಾಡಲು ಅವರಿಗೆ ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಮಾಡಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿ.

ಈ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಸುರಕ್ಷಿತ ಮತ್ತು ಸಮೃದ್ಧ ದೀಪಾವಳಿಯನ್ನು ಆಚರಿಸಿ.

ಎಲ್ಲಾ ಓದುಗರಿಗೆ ದೀಪಾವಳಿಯ ಶುಭಾಶಯಗಳು

RELATED ARTICLES
- Advertisment -
Google search engine

Most Popular