ಪಿರಿಯಾಪಟ್ಟಣ: ಕೇಂದ್ರಿಯ ರೇಷ್ಮೆ ಮಂಡಳಿ ನಾಮ ನಿರ್ದೇಶಕ ಸದಸ್ಯರಾಗಿ ಬೆಕ್ಕರೆ ನಂಜುಂಡಸ್ವಾಮಿ ಆಯ್ಕೆಯಾಗಿದ್ದಾರೆ.
ಆಯ್ಕೆ ಬಳಿಕ ಪ್ರಗತಿಪರ ರೇಷ್ಮೆ ಕೃಷಿಕ ಬೆಕ್ಕರೆ ನಂಜುಂಡಸ್ವಾಮಿ ಅವರ ನಿವಾಸಕ್ಕೆ ಪಿರಿಯಾಪಟ್ಟಣ ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇಶ್ ಭೇಟಿ ನೀಡಿ ಅವರನ್ನು ಅಭಿನಂದಿಸಿದರು, ಬಳಿಕ ಮಾತನಾಡಿದ ಅವರು ರೇಷ್ಮೆ ಬೆಳೆಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಸವಲತ್ತುಗಳನ್ನು ವಿತರಿಸುತ್ತಿದ್ದು ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಮೈಮುಲ್ ನಿರ್ದೇಶಕರಾದ ಬಸವನಹಳ್ಳಿ ಪ್ರಕಾಶ್ ಮಾತನಾಡಿ ರೈತರು ವ್ಯವಸಾಯದ ಜೊತೆ ಉಪ ಕಸುಬುಗಳನ್ನು ಅಳವಡಿಸಿಕೊಂಡಾಗ ಆರ್ಥಿಕವಾಗಿ ಸಬಲರಾಗಬಹುದು ಈ ನಿಟ್ಟಿನಲ್ಲಿ ಸಚಿವರಾದ
ಕೆ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ತಾಲೂಕಿನಾದ್ಯಂತ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಬೆಕ್ಕರೆ ನಂಜುಂಡಸ್ವಾಮಿ ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ನೀಡಿರುವ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿ ರೇಷ್ಮೆ ಕೃಷಿಕರ ಹಿತ ಕಾಪಾಡುವೆ ನನ್ನ ಆಯ್ಕೆಗೆ ಸಹಕರಿಸಿದ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವರಾದ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಮತ್ತು ಸಮಸ್ತ ರೇಷ್ಮೆ ಕೃಷಿಕರಿಗೆ ಧನ್ಯವಾದ ಹೇಳಿದರು.
ಈ ಸಂದರ್ಭ ರೇಷ್ಮೆ ಇಲಾಖೆ ಅಧಿಕಾರಿ ಚಂದ್ರೇಗೌಡ, ಪ್ರಗತಿಪರ ಕೃಷಿಕರಾದ ಬಿ.ಎನ್ ಲೋಕೇಶ್, ರುಕ್ಮಂಗದಾಚಾರ್ ಮತ್ತಿತರಿದ್ದರು.