Friday, January 2, 2026
Google search engine

Homeರಾಜ್ಯಸುದ್ದಿಜಾಲಬೆಳಗಾವಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್‌ ಅಧಿಕಾರ ಸ್ವೀಕಾರ.

ಬೆಳಗಾವಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್‌ ಅಧಿಕಾರ ಸ್ವೀಕಾರ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್‌ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತ ನೀಡಲಾಗುವುದು. ತಮಗಾದ ಅನ್ಯಾಯದ ಕುರಿತು ಸಮಸ್ಯೆ ಹೇಳಿಕೊಳ್ಳಲು ಹಾಗೂ ದೂರು ನೀಡಲು ಪೊಲೀಸ್ ಇಲಾಖೆ ಎಲ್ಲ ಕಚೇರಿಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುವುದು’ ಎಂದರು.

‘ಜನರಿಗೆ ಕಾನೂನಿನ ಭಯವಿರಬೇಕೇ ಹೊರತು, ಪೊಲೀಸರ ಭಯವಲ್ಲ. ಅಂಥ ವಾತಾವಾರಣವನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗುವುದು’ ಎಂದರು.

‘ಜಿಲ್ಲೆಯ ಠಾಣೆಗಳಲ್ಲಿ ಯಾವುದೇ ಪ್ರಕರಣದ ಕುರಿತು ಕಾನೂನಿನ ಅಡಿಯೇ ರಾಜಿ ಪಂಚಾಯ್ತಿ ಆಗಬೇಕು’ ಎಂದು ತಿಳಿಸಿದರು.

ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು. ಸ್ವತಃ ನಾನೂ ಗುಡ್ಡಕ್ಕೆ ಹೋಗಿ, ವಾಸ್ತವ ಸ್ಥಿತಿ ಪರಿಶೀಲಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES
- Advertisment -
Google search engine

Most Popular