Tuesday, July 1, 2025
Google search engine

Homeಅಪರಾಧಬೆಳಗಾವಿ: ಆಟೋದಲ್ಲೇ ಪ್ರೇಮಿಗಳ ಆತ್ಮಹತ್ಯೆ

ಬೆಳಗಾವಿ: ಆಟೋದಲ್ಲೇ ಪ್ರೇಮಿಗಳ ಆತ್ಮಹತ್ಯೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಪ್ರೇಮಿಗಳು ಆಟೋದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಸವದತ್ತಿ ತಾಲೂಕಿನ ಮುನವಳ್ಳಿಯ ನಿವಾಸಿಗಳಾದ ರಾಘವೇಂದ್ರ ಜಾಧವ್ (28) ಮತ್ತು ರಂಜೀತಾ ಚೋಬರಿ (26) ಆತ್ಮಹತ್ಯೆ ಮಾಡಿಕೊಂಡ ದುರಂತದ ಪ್ರೇಮಿಗಳು.

ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ 15 ದಿನಗಳ ಹಿಂದೆ ರಂಜೀತಾ ಮನೆಯವರು ಬೇರೊಬ್ಬ ಯುವಕನೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಮನನೊಂದು ರಂಜೀತಾ ಈ ವಿಷಯವನ್ನು ತನ್ನ ಪ್ರೇಮಿ ರಾಘವೇಂದ್ರಗೆ ತಿಳಿಸಿದ್ದಾಳೆ.

ಇದರಿಂದ ದುಃಖಿತರಾದ ಇಬ್ಬರೂ ಇಂದು ಬೆಳಗ್ಗೆ ಆಟೋ ಮೂಲಕ ಚಿಕ್ಕನಂದಿ ಗ್ರಾಮ ಹೊರವಲಯದ ನಿರ್ಜನ ಪ್ರದೇಶಕ್ಕೆ ಹೋಗಿ, ಆಟೋದ ಹಿಂದಿನ ಸೀಟಿನ ಮೇಲಿನ ಲೋಹದ ರಾಡ್‌ಗೆ ಅಗ್ಗ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ತಕ್ಷಣವೇ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ಪ್ರೇಮ ಮತ್ತು ನಿರಾಶೆಯ ನಡುವಿನ ಘರ್ಷಣೆಯ ಭೀಕರ ಚಿತ್ತಾರವನ್ನೆ ಹುಟ್ಟಿಸಿ, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

RELATED ARTICLES
- Advertisment -
Google search engine

Most Popular