Monday, May 26, 2025
Google search engine

Homeಅಪರಾಧಬೆಳಗಾವಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 7.98 ಲಕ್ಷ ರೂ ವಶ

ಬೆಳಗಾವಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 7.98 ಲಕ್ಷ ರೂ ವಶ

ಬೆಳಗಾವಿ: ಖಾನಾಪೂರ ವಿಧಾನಸಭಾ ಕ್ಷೇತ್ರದ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 7.98 ಲಕ್ಷ ರೂ ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಎಸ್ಎಸ್ ಟಿ ತಂಡದ ಅಧಿಕಾರಿಗಳಾದ ಮಲಗೌಡ ಪಾಟೀಲ ಅವರು ಶುಕ್ರವಾರ ಕಣಕುಂಬಿ ಚೆಕ್ ಪೋಸ್ಟ್ ದಲ್ಲಿ ಬೆಳಿಗ್ಗೆ ಕರ್ತವ್ಯದಲ್ಲಿದ್ದಾಗ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದ ಸಂಜಯ ಬಸವರಾಜ ರೆಡ್ಡಿ, ಅವರು ಪ್ರಯಾಣಿಸುತ್ತಿದ್ದ ವಾಹನ (ಸಂಖ್ಯೆ ಕೆ.ಎ-29 ಎಪ್-1532) ತಪಾಸಣೆ ನಡೆಸಿದಾಗ ಅವರ ಬಳಿ ದಾಖಲೆ ಇಲ್ಲದ 7.98 ಲಕ್ಷರೂ ಪತ್ತೆಯಾಗಿದೆ. ಈ ವಾಹನವು ಗೋವಾದಿಂದ ಬೆಳಗಾವಿಗೆ ಹೋಗುತ್ತಿತ್ತು.

ಹಣದ ಬಗ್ಗೆ ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ಎಸ್ಎಸ್ ಟಿ ತಂಡದ ಅಧಿಕಾರಿಗಳು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿರುವ ಹಣವನ್ನು ಖಾನಾಪೂರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular