Tuesday, September 23, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ ಗ್ರಾಮೀಣ: ಮಟ್ಕಾ ಅಟ್ಟಹಾಸಕ್ಕೆ ಕಡಿವಾಣ ಹಾಕುವವರು ಯಾರು?: ಸಾರ್ವಜನಿಕರ ಪ್ರಶ್ನೆ

ಬೆಳಗಾವಿ ಗ್ರಾಮೀಣ: ಮಟ್ಕಾ ಅಟ್ಟಹಾಸಕ್ಕೆ ಕಡಿವಾಣ ಹಾಕುವವರು ಯಾರು?: ಸಾರ್ವಜನಿಕರ ಪ್ರಶ್ನೆ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಬೆಳಗಾವಿ ಗ್ರಾಮೀಣ ವಡಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾನಿರ್ಭಯಾ
ವಿಲ್ಲದೆ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಕಿಣಿ ರಸ್ತೆಯ ವಿಶೇಶ್ವರಯ್ಯ ಮಹಾವಿದ್ಯಾಲಯದ ಸಮೀಪ, ಅಶೋಕ್ ಆರ್ಯನ್ ಗೇಟ್ ಎದುರಿನ ಮೇಣ ರಸ್ತೆಯಲ್ಲಿ
ಮಟ್ಕಾ ಬರೆದುಕೊಳ್ಳುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ರಾಜಕೀಯ ಬೆಂಬಲವೇ?: ಪ್ರಶ್ನೆ ಇದಕ್ಕೆ ಕಾರಣವೆಂಬ ಆರೋಪಗಳು ಸಾರ್ವಜನಿಕರ ಮಧ್ಯೆ ಕೇಳಿ ಬರುತ್ತಿವೆ. ಘಟನೆಯ ದೃಶ್ಯಾವಳಿಗಳನ್ನು ದಿನಾಂಕ 22 ಸೆಪ್ಟೆಂಬರ್ ರಂದು ಠಾಣಾ ಪಿ.ಐ. ಅವರ ಅಧಿಕೃತ ಮೊಬೈಲ್ ಸಂಖ್ಯೆಗೆ ಕಳುಹಿಸಿದ್ದರು. ಆದರೆ, ಪೊಲೀಸರು ಹಾಗೂ ಮಟ್ಕಾ ದಂಧೆಗಾರರು ಇದನ್ನು ಲಘುವಾಗಿ ತೆಗೆದುಕೊಂಡಂತಾಗಿದೆ.

ಈ ಹಿನ್ನೆಲೆಯಲ್ಲಿ, ಗ್ರಾಮೀಣ ಪ್ರದೇಶದ ಜನತೆ “ನಗರದಲ್ಲಿ ಖಡಕ್ ಅಧಿಕಾರಿ ಎಂಬ ಹೆಸರು ಗಳಿಸಿರುವ ಪೊಲೀಸ್ ಆಯುಕ್ತರು ಈ ಅಕ್ರಮ ಮಟಕಾ ಜೂಜಾಟದತ್ತ ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸುತ್ತಿದ್ದಾರೆ. ಈ ಮಟ್ಕಾ ದಂಧೆಗೆ ಕಡಿವಾಣ ಬೀಳುತ್ತದೆಯೇ ಅಥವಾ ಮತ್ತೆ ರಾಜಕೀಯ ಬೆಂಬಲದಿಂದ ಮುಂದುವರಿಯುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.

RELATED ARTICLES
- Advertisment -
Google search engine

Most Popular