Monday, December 8, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ.

ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಸೋಮವಾರ ಆರಂಭವಾಗುವ, ವಿಧಾನಮಂಡಲದ 14ನೇ ಚಳಿಗಾಲದ ಅಧಿವೇಶನಕ್ಕೆ 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ 6,000 ಪೊಲೀಸರು, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದ್ದಾರೆ.

ಬಹುಪಾಲು ಸಿಬ್ಬಂದಿ ಈಗಾಗಲೇ ನಗರಕ್ಕೆ ಬಂದಿದ್ದಾರೆ. ನಗರ ಪೊಲೀಸ್ ಕಮಿಷನ‌ರ್ ಭೂಷಣ ಬೊರಸೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗೆ ಶನಿವಾರ ಕರ್ತವ್ಯ ನಿಯೋಜನೆ ಮಾಡಲಾಯಿತು.
ಸುವರ್ಣಸೌಧದ ಸುತ್ತ ಪ್ರತಿ ದಿನ ಉದ್ಯಾನ ನಿರ್ವಹಣೆ, ಸ್ವಚ್ಛತೆ, ಅಡುಗೆ ಬಡಿಸುವುದು ಸೇರಿದಂತೆ ವಿವಿಧ ಕೆಲಸಗಳಿಗೆ 500ಕ್ಕೂ ಹೆಚ್ಚು ಕೂಲಿ ಆಳುಗಳನ್ನು ಬಳಸಿಕೊಳ್ಳಲಾಗುತ್ತಿದೆ.
ವಸತಿಗಾಗಿ 3,000 ಕೊಠಡಿ ಕಾಯ್ದಿರಿಸಲಾಗಿದೆ. ಸರ್ಕಾರಿ ವಸತಿಗೃಹ, ಅತಿಥಿಗೃಹ, ವಿಶ್ವವಿದ್ಯಾಲಯಗಳ ಕೊಠಡಿ, ಖಾಲಿ ಇರುವ ಸರ್ಕಾರಿ ಕಟ್ಟಡ, ಲಾಡ್ಜ್, ಕಲ್ಯಾಣ ಮಂಟಪ ಹಾಗೂ ಬಳಕೆಗೆ ಸೂಕ್ತವಾದ ಅಪಾರ್ಟ್‌ಮೆಂಟ್‌ಗಳನ್ನು 12 ದಿನಗಳ ಅವಧಿಗೆ ಬಾಡಿಗೆ ಪಡೆಯಲಾಗಿದೆ.
ಸುವರ್ಣ ಸೌಧ ನಗರದಿಂದ 12 ಕಿ.ಮೀ ದೂರದಲ್ಲಿದೆ. ಅಧಿಕಾರಿ, ಸಿಬ್ಬಂದಿ ಕರೆದೊಯ್ಯಲು- ಕರೆತರಲು 500ಕ್ಕೂ ಹೆಚ್ಚು ವಾಹನಗಳನ್ನು ಚಾಲಕರ ಸಮೇತ ಬಳಸಿಕೊಳ್ಳಲಾಗುತ್ತಿದೆ. ಶೇ 70ರಷ್ಟು ವಾಹನಗಳನ್ನೂ ಬಾಡಿಗೆಗೆ ಪಡೆಯಲಾಗಿದೆ.

ಸಚಿವರು, ಶಾಸಕರು, ಗಣ್ಯರು ಬಂದಿಳಿಯಲು ಸುವರ್ಣಸೌಧ ಆವರಣದಲ್ಲಿ ಒಂದು, ಕುಮಾರಸ್ವಾಮಿ ಬಡಾವಣೆಯಲ್ಲಿ ಇನ್ನೊಂದು ಹೆಲಿಪ್ಯಾಡ್‌ಗಳನ್ನು ಸಿದ್ಧತೆಯಲ್ಲಿ ಇಡಲಾಗಿದೆ.
ಆಂಬುಲೆನ್ಸ್, ಅಗ್ನಿಶಾಮಕ ದಳ, ತುರ್ತು ಚಿಕಿತ್ಸೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

100ರ ಗಡಿ ದಾಟಲಿದೆ ಪ್ರತಿಭಟನೆಗಳ ಸಂಖ್ಯೆ’
ಈ ಬಾರಿ ಪ್ರತಿಭಟನೆಗಳ ಸಂಖ್ಯೆ 100 ಗಡಿ ದಾಟುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಸಂಘಟನೆಗಳು ಅನುಮತಿ ಪಡೆದಿವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಸುವರ್ಣ ಉದ್ಯಾನದ ಖಾಲಿ ಜಾಗ ಹಾಗೂ ಹಳೆ ಪಿಬಿ ರಸ್ತೆ ಪಕ್ಕದಲ್ಲಿ ಪ್ರತಿಭಟನೆಗೆ ಶಾಮಿಯಾನ ಹಾಕಲಾಗಿದೆ. ಎರಡೂ ಕಡೆ ವೇದಿಕೆಗಳು ಧ್ವನಿವರ್ಧಕ ಸಲಕರಣೆ ನೀರು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸೌಧದಿಂದ ಒಂದೂವರೆ ಕಿ.ಮೀ ದೂರದಲ್ಲಿ ಟೆಂಟ್‌ ಸಿಟಿ ನಿರ್ಮಿಸಿದ್ದು ಅಲ್ಲಿ 2500 ಪೊಲೀಸರಿಗೆ ವಸತಿ ಕಲ್ಪಿಸಲಾಗಿದೆ. ಇವರು ಪ್ರತಿಭಟನೆಗಳ ಮೇಲೆ ನಿಗಾ ಇಡಲಿದ್ದಾರೆ.

RELATED ARTICLES
- Advertisment -
Google search engine

Most Popular