ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 22 ವರ್ಷದ ಸರ್ಫರಾಜ್ ಹರಪ್ಪನಹಳ್ಳಿ, ರಿಹಾನ್ ಮತ್ತು ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ.
ಬೆಳಗಾವಿ: ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 22 ವರ್ಷದ ಸರ್ಫರಾಜ್ ಹರಪ್ಪನಹಳ್ಳಿ, ರಿಹಾನ್ ಮತ್ತು ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ. 19 ವರ್ಷದ ಶಹಾನವಾಜ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಮಲಗಿದ್ದವರು ನಿಗೂಢವಾಗಿ ಮೃತಪಟ್ಟಿದ್ದು ಮಕ್ಕಳನ್ನು ಕಳಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸೊಳ್ಳೆ ಬತ್ತಿ ಹೊಗೆ ಮತ್ತು ಚಳಿ ಕಾಯಿಸಲು ಹಾಕಿದ ಬೆಂಕಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಾಳಮಾರುತಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



