Tuesday, September 16, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿ: ಪೌರರಕ್ಷಣಾ ದಳದ ಸ್ವಯಂ ಸೇವಕರಾಗಲು ಅರ್ಜಿ ಆಹ್ವಾನ

ಬಳ್ಳಾರಿ: ಪೌರರಕ್ಷಣಾ ದಳದ ಸ್ವಯಂ ಸೇವಕರಾಗಲು ಅರ್ಜಿ ಆಹ್ವಾನ

ಬಳ್ಳಾರಿ: ಜಿಲ್ಲೆಯಲ್ಲಿ ಪೌರರಕ್ಷಣಾ ದಳದ ಸ್ವಯಂ ಸೇವಕರಾಗಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪೌರರಕ್ಷಣಾ ದಳದ ಉದ್ದೇಶ ಪ್ರಕೃತಿ ವಿಕೋಪ, ವಿಪತ್ತು ನಿರ್ವಹಣೆ ಮತ್ತು ಮಾನವ ನಿರ್ಮಿತ ವಿಕೋಪಗಳ ಸಮಯದಲ್ಲಿ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ಕಾಪಾಡಲು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಂತಹ ಸಾಮಾಜಿಕ ಕಾರ್ಯವನ್ನು ಮಾಡಲು ಇಚ್ಛಿಸುವ ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಸದಸ್ಯರಾಗುವ ಮೂಲಕ ಸೇವೆ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರ ರಸ್ತೆಯ ದೇವರಾಜು ಅರಸು ಭವನ ಎದುರುಗಡೆಯ ಜಿಲ್ಲಾ ಪೌರರಕ್ಷಣಾ ಕಚೇರಿ ಅಥವಾ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಅಕ್ಟೋಬರ್ 04 ರವರೆಗೆ ಅರ್ಜಿ ಪಡೆಯಬಹುದಾಗಿದೆ.

ಸೂಚನೆ: ಪೌರರಕ್ಷಣಾ ವಿಭಾಗದ ಸದಸ್ಯನಾಗಲು ಯಾವುದೇ ವಿದ್ಯಾರ್ಹತೆ ಇರುವುದಿಲ್ಲ. ಮಾಜಿ ಯೋಧರು ಮತ್ತು ನಿವೃತ್ತ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುನ್ನಡೆಸಬಹುದು. ಈ ಸದಸ್ಯರು ಸಮಾಜ ಸೇವೆಯ ಭಾವನೆಯಿಂದ ಬರಬೇಕೆ ಹೊರತು ಅನ್ಯ ಭಾವನೆಗಳಿಂದ ಕೂಡಿರುವುದಿಲ್ಲ.

ಸ್ವ-ಇಚ್ಛೆಯಿಂದ ಸ್ವಯಂ ಸೇವಕರಾಗಿ ಕಾರ್ಯ/ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಯಾವುದೇ ಧನಸಹಾಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.08392 276421 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪೌರರಕ್ಷಣಾ ದಳದ ಮುಖ್ಯ ವಾರ್ಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular