Tuesday, May 20, 2025
Google search engine

Homeರಾಜ್ಯಬಳ್ಳಾರಿ: ಬಾಣಂತಿಯರ ಸಾವು ಪ್ರಕರಣ; ಆಸ್ಪತ್ರೆ ಎದುರು ಶ್ರೀರಾಮುಲು ಉಪವಾಸ ಸತ್ಯಾಗ್ರಹ

ಬಳ್ಳಾರಿ: ಬಾಣಂತಿಯರ ಸಾವು ಪ್ರಕರಣ; ಆಸ್ಪತ್ರೆ ಎದುರು ಶ್ರೀರಾಮುಲು ಉಪವಾಸ ಸತ್ಯಾಗ್ರಹ

ಬಳ್ಳಾರಿ: ಬಾಣಂತಿಯರ ಸಾವು ಪ್ರಕರಣ ಮತ್ತಷ್ಟು ಕಾವು ಪಡೆದಿದೆ. ಆರೋಗ್ಯ ಇಲಾಖೆ, ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಧರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇಂದು ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮುಂದೆ ಶ್ರೀರಾಮುಲು ನೇತೃತ್ವದಲ್ಲಿ ಧರಣಿ ನಡೆದಿದೆ.

ರಾಜ್ಯ ಸರ್ಕಾರದ ವಿರುದ್ಧ ರಾಮಲು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಮೃತ ಕುಟುಂಬಕ್ಕೆ ಸಚಿವರು ಭೇಟಿ ನೀಡುತ್ತಿಲ್ಲ. ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರ ನೇರ ಕಾರಣ. ಸಾವಿಗೆ ಕಾರಣ ಕೊಡಬೇಕು. ಒಂದೇ ತಿಂಗಳಲ್ಲಿ ಐದು ಜನ ಬಾಣಂತಿಯರ ಸಾವಾಗಿದೆ. ಬೆಳಗಾವಿ ಅಧಿವೇಶನಕ್ಕಾಗಿ ಆರೋಗ್ಯ ಸಚಿವರು ಬಳ್ಳಾರಿಗೆ ಬರುತ್ತಿದ್ದಾರೆ. ಸದನದಲ್ಲಿ ಉತ್ತರ ನೀಡಲು ಎಂದು ಜಿಲ್ಲಾ ಆಸ್ಪತ್ರೆ ನಾಮಕಾವಸ್ಥೆ ಭೇಟಿ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular