Monday, September 15, 2025
Google search engine

Homeರಾಜ್ಯಬೆಂಗಳೂರು: 3 ದಿನ ಕಾವೇರಿ ನೀರು ಪೂರೈಕೆ ಸ್ಥಗಿತ

ಬೆಂಗಳೂರು: 3 ದಿನ ಕಾವೇರಿ ನೀರು ಪೂರೈಕೆ ಸ್ಥಗಿತ

ಬೆಂಗಳೂರು : ಬೆಂಗಳೂರು ಮಂದಿಗೆ BWSSB ಬಿಗ್ ಶಾಕ್ ಕೊಟ್ಟಿದೆ. ಇಂದಿನಿಂದ ಮೂರು ದಿನ ಕಾವೇರಿ ನೀರು ಪೂರೈಕೆ ಬಂದ್ ಆಗುತ್ತಿದೆ.

ಕಾವೇರಿ ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್​ನಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ 17 ರ ವರೆಗೆ ಹಲವೆಡೆ ಕಾವೇರಿ ನೀರಿನ ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆ. 15ರ ಮಧ್ಯರಾತ್ರಿ 1ರಿಂದ ಸೆ. 17ರ ಮಧ್ಯಾಹ್ನ 1 ಗಂಟೆವರೆಗೆ ಕಾವೇರಿ 5ನೇ ಹಂತದಲ್ಲಿ 60 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ ಎಂದು BWSSB ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಲಾಗಿದೆ.

3 ದಿನ ಬೆಂಗಳೂರು ಮಂದಿಗೆ ನೀರಿನ ಅಭಾವ ಎದುರಾಗಲಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನೀರಿನ ಟ್ಯಾಂಕರ್ ಮಾಫಿಯಾ ಮೂರೂಪಟ್ಟು ಹಣ ವಸೂಲಿ ಮಾಡಿ ಮನೆಮನೆಗೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸುಲಿಗೆ ಮಾಡಲಾಗುತ್ತಿದೆ.

ನಿರಂತರ ನೀರು ಸರಬರಾಜಿಗೆ BWSSB ಕ್ರಮ ಕೈಗೊಳ್ಳುತ್ತಿದೆ. ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಕಾವೇರಿ 5ನೇ ಹಂತ – ಸೆಪ್ಟೆಂಬರ್‌ 15 ರ ಬೆಳಗ್ಗೆ 1 ರಿಂದ ಸೆಪ್ಟೆಂಬರ್ 17 ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳು.ಕಾವೇರಿ ಹಂತ 1, 2, 3, 4 ರಲ್ಲಿ – ಸೆಪ್ಟೆಂಬರ್ 16 ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 17 ರ ಬೆಳಗ್ಗೆ 6ರವರೆಗೆ ಒಟ್ಟು 24 ಗಂಟೆಗಳು. ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇನ್ನು ಬೆಂಗಳೂರು ನಿವಾಸಿಗಳು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳ ಬೇಕು ಮತ್ತು ನಿರ್ವಹಣಾ ಅವಧಿಯಲ್ಲಿ ನೀರಿನ ಬಳಕೆಯನ್ನು ವಿವೇಚನೆಯಿಂದ ಮಾಡಿಕೊಳ್ಳಬೇಕು ಎಂದು BWSSB ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular