Wednesday, December 10, 2025
Google search engine

Homeರಾಜಕೀಯಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಶಾಸಕರಲ್ಲೇ ಬೆಟ್ಟಿಂಗ್..!

ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಶಾಸಕರಲ್ಲೇ ಬೆಟ್ಟಿಂಗ್..!

ಬೆಳಗಾವಿ : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ 2ನೇ ದಿನಕ್ಕೆ ಕಾವೇರಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಗೆ ಕಾಲಿಡುತ್ತಿದ್ದಂತೆ ಮುಂದಿನ ಸಿಎಂ ಎನ್ನುವ ಕೂಗು ಜೋರಾಗಿದೆ. ಅಧಿವೇಶದಲ್ಲೂ ಸಿಎಂ.. ಸಿಎಂ ಚರ್ಚೆ ಮೊಳಗಿದೆ. ಇದೀಗ ಕಾಂಗ್ರೆಸ್​ ಕುರ್ಚಿ ಕಾದಾಟ ಬಿಜೆಪಿಗೆ ಅಸ್ತ್ರವಾಗಿದ್ದು, ಕೈ ನಾಯಕರ ಮೇಲೆ ವಿಪಕ್ಷಗಳು ಮುಗಿಬೀಳುತ್ತಿವೆ.

ಇನ್ನೂ ಈ ವಿಚಾರವಾಗಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಕಾಂಗ್ರೆಸ್​ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂದೇ ಬಿಜೆಪಿ ಶಾಸಕ ಸರ್ಕಾರದ ಕಾಲು ಎಳೆದಿದ್ದಾರೆ. ಇತ್ತ ಯತ್ನಾಳ್ ಕೂಡ ನಾಯಕತ್ವದ ಬದಲಾವಣೆಗೆ ಗೊಂದಲದ ಬಗ್ಗೆ ಗುಡುಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸದನದಲ್ಲಿ ಮುಂದಿನ ಮುಖ್ಯಮಂತ್ರಿ ಕೂಗಿನ ಬಗ್ಗೆ ಬಿಜೆಪಿ ಪ್ರಸ್ತಾಪ ಮಾಡಿದ್ದು, ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಬಗ್ಗೆ ಮಾತಾಡಿದ್ದಾರೆ. ಆನ್ ಲೈನ್ ಗೇಮ್ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಹೇಳ್ತಿದ್ದಾರೆ. ಅದರಂತೆ ಸರ್ಕಾರದಲ್ಲಿ ಮುಂದಿನ ಮುಖ್ಯಮಂತ್ರಿ ಗೊಂದಲದ ಬಗ್ಗೆಯೂ ಕ್ರಮ ತೆಗೆದುಕೊಳ್ತೀರಾ ಎಂದು ಶಾಸಕ ಸುನೀಲ್​  ಕಿಚಾಯಿಸಿದ್ದಾರೆ.

ಈ ವೇಳೆ ನೀವು ಇಲ್ಲಿ ಬೆಟ್ಟಿಂಗ್ ಪ್ರಸ್ತಾಪ ಮಾಡ್ತಾ ಇದ್ದೀರಾ? ಆದ್ರೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಶಾಸಕರಲ್ಲೇ ಬೆಟ್ಟಿಂಗ್ ನಡೆಯುತ್ತಿದೆ ಎಂದು ಶಾಸಕ ಸುನೀಲ್ ಆರೋಪಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕತ್ವ ಬದಲಾವಣೆ ಗೊಂದಲ ಬಿಜೆಪಿಗರಿಗೆ ಅಸ್ತ್ರವಾಗಿದೆ.

RELATED ARTICLES
- Advertisment -
Google search engine

Most Popular