Friday, August 22, 2025
Google search engine

Homeರಾಜ್ಯಸುದ್ದಿಜಾಲಆ23ಕ್ಕೆ ಇಟಗಿ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಭಾದ್ರಪದ ಅಮಾವಾಸ್ಯೆ 27ನೇ ಪೂಜೆ

ಆ23ಕ್ಕೆ ಇಟಗಿ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಭಾದ್ರಪದ ಅಮಾವಾಸ್ಯೆ 27ನೇ ಪೂಜೆ

ಬೆಂಗಳೂರು : ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿಯಲ್ಲಿ (ಕೂಕನೂರು) ಆ೨೩ರ ಶನಿವಾರ ಬೆಳಿಗ್ಗೆ ೧೧ ರಿಂದ ೪ ರವರೆಗೆ ಪೂಜೆ ಮತ್ತು ಪ್ರಸಾದ ವಿನಿಯೋಗ, ಶ್ರೀ ವಿಶ್ವಾವಸು ನಾಮ ಸಂವತ್ಸರ, ಶ್ರಾವಣ ಮಾಸೆ ವರ್ಷ ಋತು, ದಕ್ಷಿಣಾಯಣ ಕೃಷ್ಣ ಪಕ್ಷದ ೨೭ನೇ ಅಮಾವಾಸ್ಯೆ ಪೂಜೆಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ, ಶ್ರೀ ನಾಗಚೌಡೇಶ್ವರಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಕಡ್ಡಾಯವಾಗಿ ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ ಮಾಡುತ್ತೇನೆ. (ಕೆಲವರು ಮಕ್ಕಳನ್ನು ಒಳಗೆ ಕಳುಹಿಸಿ ಪೂಜೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದಯಮಾಡಿ ಹಾಗೆ ಮಾಡದೆ ಹೊರಗಿನಿಂದಲೇ ಪೂಜೆ ಮಾಡಿ ನಮಸ್ಕರಿಸಿ) ಅಮಾವಾಸ್ಯೆ ದಿನ ಮಾತ್ರ ವಿಶೇಷ ದರ್ಶನ ನೀಡುವ ಕ್ಷೇತ್ರ, ನಡೆದುಕೊಳ್ಳುವವರು ಸಂಕಲ್ಪ ಮಾಡಿ ೫ ಅಮಾವಾಸ್ಯೆ ಪೂಜೆ ಪೂರೈಸಬೇಕು ಎಂದು ಕ್ಷೇತ್ರ ಉಸ್ತುವಾರಿ ರಮೇಶ ಸುರ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು, ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿ, ನಂ. ೪೬೮, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊಬೈಲ್ : ೯೮೪೫೩೦೭೩೨೭ ನಂಬರ್‍ಗೆ ಸಂಪರ್ಕಿಸಬಹುದು.

RELATED ARTICLES
- Advertisment -
Google search engine

Most Popular