Tuesday, September 30, 2025
Google search engine

Homeರಾಜ್ಯಸುದ್ದಿಜಾಲಭಗತ್ ಸಿಂಗ್ ಜಯಂತಿ ಆಚರಣೆ

ಭಗತ್ ಸಿಂಗ್ ಜಯಂತಿ ಆಚರಣೆ

ಚಾಮರಾಜನಗರ: ಬ್ಯಾಡಮೂಡ್ಲು ಗ್ರಾಮದ ಶ್ರೀ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಭಗತ್ ಸಿಂಗ್ ರವರ ಜನ್ಮದಿನವನ್ನು ಆಚರಿಸಲಾಯಿತು.

ಉದ್ಘಾಟನೆಯನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ , ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿ ಭಗತ್ ಸಿಂಗ್ ಅಪ್ಪಟ ಕ್ರಾಂತಿಕಾರಿ. ರಾಷ್ಟ್ರಪ್ರೇಮಿ. ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿಕೊಂಡ ಮಹಾ ತ್ಯಾಗಿ. ರಾಷ್ಟ್ರೀಯ ಹೋರಾಟದ ಮನೆತನದಲ್ಲಿ ಹುಟ್ಟಿದ ಭಗತ್ ಸಿಂಗ್ ಬಾಲ್ಯದಿಂದಲೂ ಬ್ರಿಟಿಷರ ವಿರುದ್ಧವಾಗಿ ಬ್ರಿಟಿಷರನ್ನು ಕ್ರಾಂತಿಕಾರಿ ಚಟುವಟಿಕೆಯ ಮೂಲಕ ಭಾರತದಿಂದ ಓಡಿಸಬೇಕೆಂಬ ಗುರಿಯೊಂದಿಗೆ ಹೋರಾಟ ನಡೆಸಿ ಕೇವಲ 23 ವರ್ಷದಲ್ಲೇ ಗಲ್ಲಿಗೇರುವ ಮೂಲಕ ದೇಶಕ್ಕಾಗಿ ಅರ್ಪಿಸಿಕೊಂಡ ಮಹಾ ವ್ಯಕ್ತಿ .ಕೋಟ್ಯಾಂತರ ಭಾರತೀಯ ಯುವಕರ ಹೃದಯದಲ್ಲಿ ಭಗತ್ ಸಿಂಗ್ ನೆಲೆಸಿದ್ದಾರೆ. ಕಳೆದ 15 ವರ್ಷಗಳಿಂದ ಭಗತ್ ಸಿಂಗ್ ರವರ ಕಾರ್ಯಕ್ರಮವನ್ನು ಗಡಿ ಗ್ರಾಮವಾದ ಬ್ಯಾಡ ಮೂಡಿನಲ್ಲಿ ನೆರವೇರಿಸಿಕೊಂಡು ಹೋಗುತ್ತಿರುವ ಸಂಸ್ಥೆಗೆ ಧನ್ಯವಾದಗಳು.

ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿದ ಬಜಾಜ್ ಪಟೇಲ್ ಶೋ ರೂಮಿನ ಮಾಲೀಕರಾದ ವೃಷಭೇಂದ್ರಪ್ಪ ರವರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಭಿವೃದ್ಧಿಗಾಗಿ ಪಣ ತೊಡಬೇಕು. ಉನ್ನತ ಶಿಕ್ಷಣವನ್ನು ಹೊಂದಿ ಗ್ರಾಮದ ಅಭಿವೃದ್ಧಿಗೆ ಸದಾ ಕಾಲ ಕ್ರಿಯಾಶೀಲರಾಗಿ ಉತ್ತಮ ಕಾರ್ಯಗಳನ್ನು ನೆರವೇರಿಸಿ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿಕೆ ರವಿಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ಶಮಿತ್ ಕುಮಾರ್, ಪೊಲೀಸ್ ಇಲಾಖೆಯ ಮಹದೇವಸ್ವಾಮಿ, ಶ್ರೀ ಭಗತ ಸಿಂಗ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮಹದೇವ ಶೆಟ್ಟಿ, ಗ್ರಾಮದ ಮುಖಂಡ ಬಂಗಾರು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ, ಮುರುಗೇಶ್, ನಂಜುಂಡ ಶೆಟ್ಟಿ ಇದ್ದರು.

RELATED ARTICLES
- Advertisment -
Google search engine

Most Popular