Thursday, February 12, 2026
Google search engine

Homeರಾಜಕೀಯವೀರ್ ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿ : ಸಚಿವ ದಿನೇಶ್‌ ಗುಂಡೂರಾವ್‌ ವಿರೋಧ

ವೀರ್ ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿ : ಸಚಿವ ದಿನೇಶ್‌ ಗುಂಡೂರಾವ್‌ ವಿರೋಧ

ಬೆಂಗಳೂರು : ಹಿಂದೂತ್ವ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಬೇಕೆಂಬ ಬೇಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ರತ್ನ ಗೌರವವು ದೇಶದ ಸಂಪೂರ್ಣ ಜನತೆಯನ್ನು ಪ್ರತಿನಿಧಿಸುವ ಮಹಾನ್ ನಾಯಕರಿಗೆ ಮಾತ್ರ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದುವರೆದು, ಸಾವರ್ಕರ್ ಕೆಲವೇ ವರ್ಗಗಳಿಗೆಷ್ಟೇ ನಾಯರಾಗಿದ್ದರು, ಅವರು ಎಲ್ಲರಿಗೂ ಒಪ್ಪಿಗೆಯಾದ ನಾಯಕನಲ್ಲ ಎಂದರು.

ಅಲ್ಲದೆ, ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಪಾತ್ರದ ಕುರಿತು ವಿವಾದವಿದೆ, ಈ ಕಾರಣದಿಂದಾಗಿ ಅವರನ್ನು ರಾಷ್ಟ್ರದ ಮಹಾನ್ ನಾಯಕ ಎಂದು ಪರಿಗಣಿಸಲಾಗದು ಎಂದು ಟೀಕಿಸಿದರು. ಹಾಗೂ ಅಂಡಮಾನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದರು ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ಇನ್ನೂ ಇತಿಹಾಸದ ದಾಖಲೆಗಳ ಪ್ರಕಾರ, 1948ರಲ್ಲಿ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಬಂಧಿತರಾಗಿದ್ದರೂ ಸಾಕ್ಷ್ಯಗಳ ಕೊರತೆಯಿಂದ ನ್ಯಾಯಾಲಯದಿಂದ ನಿರ್ದೋಷಿಯಾಗಿ ಬಿಡುಗಡೆಗೊಂಡಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ ಕ್ಷಮಾ ಅರ್ಜಿಗಳು ಮತ್ತು ಅವರ ನಂತರದ ರಾಜಕೀಯ ಚಟುವಟಿಕೆಗಳು ಇಂದಿಗೂ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ.

ಈ ವಿಚಾರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಾವರ್ಕರ್ ಅವರನ್ನು ಕ್ರಾಂತಿಕಾರಿ ನಾಯಕ ಎಂದು ಗೌರವಿಸುತ್ತಿದ್ದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅವರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿ ಎಂದು ಶ್ಲಾಘಿಸಿದರೂ, ಕಾಂಗ್ರೆಸ್ ನಾಯಕರು ಈ ಬಗ್ಗೆ ಆಗಾಗ್ಗೆ ಪ್ರಶ್ನೆ ಎತ್ತುತ್ತಲೇ ಬಂದಿದ್ದಾರೆ.

RELATED ARTICLES
- Advertisment -
Google search engine

Most Popular