ಕೆ.ಆರ್.ಪೇಟೆ: ತಾಲೂಕಿನ ಗ್ರಾಮೀಣ ಭಾಗದ ಪ್ರತಿ ಮನೆಗೆ ಜಲ ಜೀವನ್ ಮಿಷನ್ ಯೋಜನೆ ಮೂಲಕ ಕೆ.ಆರ್.ಎಸ್. ಡ್ಯಾಂ ಮೂಲಕ ಶುದ್ದ ನೀರು ಒದಗಿಸಲಾಗುವುದು ಈ ಯೋಜನೆಯನ್ನು ಗ್ರಾಮೀಣ ಜನರ ಆರೋಗ್ಯದ ದೂರದೃಷ್ಟಿಯಿಂದ ಮಾಡಲಾಗುತ್ತದೆ ಎಂದು ಶಾಸಕ ಹೆಚ್. ಟಿ ಮಂಜು ತಿಳಿಸಿದರು. ತಾಲೂಕಿನ ,ಸಿಂಧುಘಟ್ಟ ,ಹಿರಿಕಳಲೇ,ಅಣ್ಣೇಚಾಕನಹಳ್ಳಿ, ಬೊಮ್ಮೇನ ಹಳ್ಳಿ, ಹರಿಹಾರಪುರ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗುವ ಮನೆ ಮನೆಗೆ ನಲ್ಲಿ ಅಳವಡಿಸುವ ಹಾಗೂ ಪೈಪ್‌ಲೈನ್ ನಿರ್ಮಿಸುವ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿರವರ ಕನಸಿನ ಗ್ರಾಮಗಳ ಅಭಿವೃದ್ಧಿ ಪೂರಕವಾಗಿ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿದರು ಸಹ ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ,ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸ ಮಾಡಿ ಎಂದು ಗುತ್ತಿದಾರರಿಗೆ ಸೂಚನೆ ನೀಡಿದ್ದೇನೆ ಮುಂದೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಜನ ಜೀವನ್ ಮಿಷನ್ ಯೋಜನೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಜೆ.ಜೆ.ಎಂ.ಇಂಜಿನಿಯರ್ ಪ್ರವೀಣ್, ಬಿಂದುಶ್ರೀ, ಜೆಡಿಎಸ್ ಮುಖಂಡರಾದ ಎಸ್.ಪಿ.ಸಿದ್ದೇಶ್, ಸೋಮಸುಂದರ್, ಬಲದೇವ್, ಎ.ಎಂ.ಸಂಜೀವಪ್ಪ, ಸಿಂಧುಘಟ್ಟ ಗ್ರಾ.ಪಂ.ಅಧ್ಯಕ್ಷೆ ದಿವ್ಯಗಿರೀಶ್, ಉಪಾಧ್ಯಕ್ಷ ನಂಜಪ್ಪ, ಹರಿಹರಪುರ ಗ್ರಾ.ಪಂ.ಅಧ್ಯಕ್ಷೆ ಸುಂದ್ರಮ್ಮ, ಉಪಾಧ್ಯಕ್ಷ ಬಲರಾಮೇಗೌಡ, ಪಿಡಿಓ ನಾಯಿದಾ ಅಖ್ತರ್, ಸಿಂಧುಘಟ್ಡ ಪಿಡಿಓ ನವೀನ್ ಕುಮಾರ್, ತಾಲ್ಲೂಕು ಟಿ ಎ ಪಿ ಸಿ ಎಂ ಎಸ್ ನಿರ್ದೇಶಕರಾದ ಬಲದೇವ್,ಮಂಜುನಾಥ್, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಚಂದ್ರಹಾಸ, ಪಿ. ಎಲ್.ಡಿ.ಬ್ಯಾಂಕ್ ನಿರ್ದೇಶಕ ಅಣ್ಣೇಚಾಕನಹಳ್ಳಿ ನಾಗರಾಜು, ಗ್ರಾ.ಪಂ.,ಸದಸ್ಯರಾದ ಸುಮಲತಾ,ಲಾವಣ್ಯ,ಗ್ರಾ. ಪಂ ಮಾಜಿ ಅಧ್ಯಕ್ಷ ರವಿ ಕುಮಾರ್, ಅರ್ಚಕ ರಮೇಶ್ ,ಕಸಬಾ ಹೋಬಳಿಯ ಜೆಡಿಎಸ್ ಅಧ್ಯಕ್ಷ ಗಣೇಶ್, ಮುಖಂಡರಾದ ಹಿರೀಕಳಲೆ ಸತೀಶ್, ಹರಿಹರಪುರ ರಾಮೇಗೌಡ, ಮಹಾದೇವ್, ದಿನೇಶ್, ಸುದೀ, ಸ್ವಾಮಿ, ಜಯರಾಂ, ನರಸಿಂಹ, ರಾಘವ, ರಘು, ಯೋಗ, ಶಿವರಾಂ, ಹರೀಶ್, ಸತೀಶ್, ಶ್ರೀನಿವಾಸ್, ಅರವಿಂದ್, ಮಂಜು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಗ್ರಾ.ಪಂ ಸದಸ್ಯರು ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು