Saturday, July 5, 2025
Google search engine

Homeಅಪರಾಧಕಾನೂನುಬೀದರ್: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ

ಬೀದರ್: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ

ಬೀದರ್: ಮುಖ್ಯ ಶಿಕ್ಷಕನೊಬ್ಬ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಘಟನೆ ಬೀದರ್ ನಗರದ ಹೊರವಲಯದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ನಡೆದಿದೆ.

ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ ಎಂಬಾತ 50 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ವಿಜ್ಞಾನ ಶಿಕ್ಷಕಿ ಶಶಿಕಲಾ ಎಂಬುವವರು ಪೆನ್ಷನ್ ಮಂಜೂರಿ ಪ್ರಕ್ರಿಯೆಗಾಗಿ ಮುಖ್ಯಶಿಕ್ಷಕನ ಬಳಿ ಮನವಿ ಮಾಡಿದ್ದರು. ಆದರೆ, ಪೈಲ್ ಮೂವ್‌ ಮಾಡಲು ತುಕಾರಾಂ ಕಾಂಬಳೆ ಅವರು ಬರೊಬ್ಬರಿ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.

 ಇದೀಗ 1 ಲಕ್ಷ ಹಣದ ಚೆಕ್ ಪಡೆದು, 50 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್‌‌ಪಿ ಎನ್.ಎಮ್.ಓಲೇಕಾರ್ ಮಾಗದರ್ಶನದಲ್ಲಿ ದಾಳಿ ಮಾಡಿ, ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular