ಬೆಂಗಳೂರು: ಅನೈಸರ್ಗಿಕ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದ್ದುದರಿಂದ ಸಿಐಡಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಲು ಸಾಕಷ್ಟು ಪ್ರಾಮಾಣಿಕ ಮಾಹಿತಿಗಳು ಲಭ್ಯವಾಗಿಲ್ಲವೆಂದು ಸಿಐಡಿ ಸ್ಪಷ್ಟಪಡಿಸಿದೆ.
ಜೂನ್ 23ರಂದು ಸೂರಜ್ ರೇವಣ್ಣ ಅವರನ್ನು ಪೊಲೀಸರು ಸೆಕ್ಷನ್ 377, 342 ಮತ್ತು 506 ಅಡಿಯಲ್ಲಿ ಬಂಧಿಸಿದ್ದರು. ಸಂತ್ರಸ್ತನು ಡಿಜಿಪಿಗೆ ದೂರು ನೀಡಿ, ಹಾಸನ ಎಸ್‌ಪಿಗೆ ಇ-ಮೇಲ್ ಮೂಲಕ ಪ್ರತಿಯನ್ನು ಕಳುಹಿಸಿದ್ದರು. ಆಧಾರವಾಗಿ ಪೊಲೀಸರು ತನಿಖೆ ನಡೆಸಿ ಕೇಸ್ ದಾಖಲಿಸಿದ್ದರು. ಬಳಿಕ ಸೂರಜ್ ರೇವಣ್ಣ ಹಾಸನದ ಸೆನ್ ಠಾಣೆಗೆ ತೆರಳಿ ಪ್ರತಿದೂರು ನೀಡಲು ಹೋದಾಗ ಅವರನ್ನು ಬಂಧಿಸಲಾಗಿತ್ತು. ನಂತರ, ನ್ಯಾಯಾಲಯ ಜುಲೈ 22ರಂದು ಷರತ್ತುಬದ್ಧ ಜಾಮೀನು ನೀಡಿತ್ತು.