Wednesday, May 21, 2025
Google search engine

Homeರಾಜ್ಯಸುದ್ದಿಜಾಲಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬೈಕ್ ರ್‍ಯಾಲಿ, ಪೊಲೀಸರಿಂದ ಜಾಗೃತಿ ಜಾಥ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬೈಕ್ ರ್‍ಯಾಲಿ, ಪೊಲೀಸರಿಂದ ಜಾಗೃತಿ ಜಾಥ

ಹುಣಸೂರು: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಇಂದು ಭಾನುವಾರ ಹುಣಸೂರು ತಾಲೂಕಿನ ಬಿಳಿಕರೆ ಪೊಲೀಸರು ಸರ್ವಜನಿಕರಿಗೆ ಬೈಕ್ ರ್‍ಯಾಲಿ ಮೂಲಕ ಜಾಗೃತಿ ಮೂಡಿಸಿದರು.
ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಆಭರಣಗಳ ಬಗ್ಗೆ ನಿಗಾವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ ನಿಯಮಗಳ ಬಗ್ಗೆ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಿದರು.
ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಹಾಗೂ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಬಿಳಿಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

RELATED ARTICLES
- Advertisment -
Google search engine

Most Popular