ಮಂಡ್ಯ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಬೈಕ್, ಆಟೋ, ಟ್ರ್ಯಾಕ್ಟರ್ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೆ, ಮದ್ದೂರಿನಲ್ಲಿ ಈ ಆದೇಶಕ್ಕೆ ಧಿಕ್ಕರಿಸಿ ಹೈವೆ ಗೆ ಇಳಿದ ಬೈಕ್ ಸವಾರರಿಗೆ ಮದ್ದೂರು ಸಂಚಾರಿ ಪೋಲೀಸರು ಒಂದೇ ದಿನ ನೆನ್ನೆ ಒಂದೇ ದಿನ 20 ಸಾವಿರಕ್ಕೂ ಹೆಚ್ಚು ದಂಡವನ್ನು ವಸೂಲಿ ಮಾಡಿದ್ದಾರೆ.
ಅಪಘಾತಗಳನ್ನು ತಡೆಯುವ ಉದ್ದೇಶದಿಂದಾಗಿ ಮಂಗಳವಾರದಿಂದ ಬೆಂ-ಮೈ ಹೆದ್ದಾರಿಯಲ್ಲಿ ಬೈಕ್,ಆಟೋ, ಟ್ರ್ಯಾಕ್ಟರ್ ಗಳಿಗೆ ನಿರ್ಬಂಧ ವಿಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಜಾರಿ ಮಾಡಿತ್ತು.
ಮದ್ದೂರು ತಾಲೂಕಿನ ಗಡಿಭಾಗ ನಿಡಘಟ್ಟ ಬಳಿ ಆದೇಶ ಧಿಕ್ಕರಿಸಿದ 40 ದ್ವಿಚಕ್ರ ವಾಹನ ಹಾಗೂ ಒಂದು ಟ್ರಾಕ್ಟರ್ ಗೆ ತಲಾ 500 ರೂ ದಂಡ ವಿಧಿಸಲಾಗಿದೆ.
ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗೆ ನಿಷೇಧ ಹಿನ್ನಲೆ. NHAI ಆದೇಶಕ್ಕೆ ಸ್ಥಳೀಯರು ಮತ್ತು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪ್ರೆಸ್ ರಸ್ತೆಗಾಗಿ ನಮ್ಮ ಜಮೀನು ಕೊಟ್ಟಿದ್ದೇವೆ. ನಮಗೂ ಇಂತಹ ರಸ್ತೆಯಲ್ಲಿ ಓಡಾಡಬೇಕು ಅಂತ ಆಸೆ ಇದೆ. ಬೈಕ್ ಗಳಿಗೂ ಅವಕಾಶ ಮಾಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದರು.