ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಅಲ್ಲ, ಸಿಐಡಿಗೆ ನೀಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಕ್ಲು ಶಿವ ಕೇಸ್ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಮಾಡುತ್ತಿದ್ದರು. ಇದರ ನಡುವೆ ಸಿಐಡಿಗೆ ಕೊಡಬೇಕು ಎಂದು ತೀರ್ಮಾನ ಆಗಿದೆ ಎಂದರು.
ಇನ್ನು ಮಹದಾಯಿಗೆ ಅನುಮತಿ ನೀಡಲ್ಲವೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, 2022 ರಲ್ಲಿ ಕೇಂದ್ರ ಒಂದು ರೀತಿಯಲ್ಲಿ ಅನುಮತಿ ನೀಡಿತ್ತು. ಆ ಮೇಲೆ ಸಂಘರ್ಷ ಪ್ರಾರಂಭ ಆಗಿದೆ. ಇದಕ್ಕೆ ನಿರ್ಬಂಧ ಬರಬಾರದು. ಕೇಂದ್ರ ಬಗೆಹರಿಸಬೇಕು. ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಯೋಜನೆ. ಇದಕ್ಕೆ ಕೇಂದ್ರ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ.