ಚಾಮರಾಜನಗರ: ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 76ನೇ ವರ್ಧಂತಿ ಮಹೋತ್ಸವವನ್ನು ಶ್ರೀ ಶಂಕರ ಅಭಿಯಾನಂ, ಕರ್ನಾಟಕ, ಶ್ರೀ ಶಾರದಾ ಭಜನಾ ಮಂಡಳಿ, ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ವತಿಯಿಂದ 24ರ ಮಂಗಳವಾರ ಸಂಜೆ 7 ಗಂಟೆಗೆ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶೇಷ ಪೂಜೆ, ಭಜನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಅಭಿಯಾನದ ಕುಸುಮ ಹಾಗೂ ವಿಜಯಲಕ್ಷ್ಮಿರವರು ತಿಳಿಸಿದ್ದಾರೆ.



