ವರದಿ: ವಿನಯ್ ದೊಡ್ಡಕೊಪ್ಪಲು
ಕೆ ಆರ್ ನಗರ : ನನಗೆ ಜನ್ಮ ನೀಡಿದ ತಂದೆ ತಾಯಿ ಹಾಗೂ ಗ್ರಾಮವನ್ನು ಎಂದು ಮರೆಯುವುದಿಲ್ಲ ಹಾಗೂ ನಾನಿರುವ ತನಕ ಈ ಗ್ರಾಮಕ್ಕೆ ಹಾಗೂ ಈ ಗ್ರಾಮದ ಜನತೆಗಾಗಿ ಸಣ್ಣ ಅಳಿಲು ಸೇವೆಯನ್ನು ಮಾಡುತ್ತಿರುತ್ತೇನೆ ಎಂದು ನಿವೃತ್ತ ಸೈನಿಕ ಶಿವಣ್ಣ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಬೋವಿ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ನಾನು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಊಟಕ್ಕೂ ತೊಂದರೆ ಇದ್ದಂತಹ ಸಮಯದಲ್ಲಿ ಕಠಿಣ ವಿದ್ಯಾಭ್ಯಾಸ ಮಾಡುವ ಮೂಲಕ ಸೈನಿಕ ಸೇವೆಗೆ ಸೇರಿ ನಿವೃತ್ತಿ ಹೊಂದಿ ಈಗ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ತಿಳಿಸಿದರು. ನಾನು ಜನಿಸಿದ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು ವಿದ್ಯಾಭಾಸದ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡುವ ಮೂಲಕ ಬೇರೆ ಕಡೆ ಗಮನಹರಿಸಬೇಡಿ ವಿದ್ಯಾರ್ಥಿಯ ಜೀವನ ಬಹಳ ಅತ್ಯಮೂಲ್ಯವಾಗಿದ್ದು ವಿದ್ಯಾವಂತರಾಗಿ ಉದ್ಯೋಗಕ್ಕೆ ಸೇರಿದ ನಂತರ ಆರ್ಥಿಕವಾಗಿ ಸಬಲರಾದ ನೀವು ನಿಮ್ಮ ಅಕ್ಕಪಕ್ಕದ ಜೊತೆಯಲ್ಲಿರುವವರ ಕಷ್ಟಕ್ಕೆ ಸಹಾಯ ಹಸ್ತ ಚಾಚುವಂತೆ ತಿಳಿಸಿದರು.
ನಾನು ಈಗಾಗಲೇ ಬಡ ಮಕ್ಕಳಿಗಾಗಿ ಪಿರಿಯಾಪಟ್ಟಣದಲ್ಲಿ ಉಚಿತ ಶಿಕ್ಷಣ ಸೈನಿಕ ಶಾಲೆಯನ್ನು ಪ್ರಾರಂಭ ಮಾಡಿದ್ದು ನಮ್ಮಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ಇಂದು ಸೈನ್ಯಕ್ಕೆ ಸೇರಿದ್ದಾರೆ ನಿಮಗೆ ಯಾರಿಗಾದರೂ ಸೈನಿಕ ಸೇರುವ ಬಯಕೆ ಇದ್ದಲ್ಲಿ ನಮ್ಮ ಸೈನಿಕ ಶಾಲೆಗೆ ಸೇರಬಹುದಾಗಿದೆ ಸೇರಿದಂತ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿವೃತ್ತ ಸೈನಿಕರಿಂದ ಭರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಡ್ಡರಕೊಪ್ಪಲು ಗ್ರಾಮದ ನಿವೃತ್ತ ನೌಕರರು ಹಾಗೂ ಯಜಮಾನರು ಮತ್ತು ಪಕ್ಕದ ಶಾಬಾಳ್ ಗ್ರಾಮದ ಕಿರಣ್ ಕುಮಾರ್ ಅಂಕನಹಳ್ಳಿ ಗ್ರಾಮದ ಪ್ರಕಾಶ್ ಹರೀಶ್ ಸೇರಿದಂತೆ ಇನ್ನಿತರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡರುಗಳಾದ ರಾಮ ರಾಜ ಭೋವಿ ನಟರಾಜ ಬೋವಿ ಕಾಂತರಾಜ ಭೋವಿ ಜಲೇಂದ್ರ ಬೋವಿ ಸ್ವಾಮಿ ಬೋವಿ ಕುಮಾರ ವೆಂಕಟೇಶ ಮೋಹನ ಭೋವಿ ಸತ್ಯ ಅರಸ ಬೋವಿ ಸೇರಿದಂತೆ ಇನ್ನಿತರರು ಹಾಜರಿದ್ದರು.