Monday, April 6, 2026
Google search engine

Homeರಾಜಕೀಯಮೀಸಲಾತಿ ಗೊಂದಲಕ್ಕೆ ಬಿಜೆಪಿ ಕಾರಣ : ಪರಮೇಶ್ವರ್

ಮೀಸಲಾತಿ ಗೊಂದಲಕ್ಕೆ ಬಿಜೆಪಿ ಕಾರಣ : ಪರಮೇಶ್ವರ್

ಬೆಂಗಳೂರು : ಬಿಜೆಪಿಯವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾತಿಯನ್ನು ಒಡೆದಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಠಿ ಮಾಡಿದ್ದು ಯಾರು ಅದಕ್ಕಾಗಿಯೇ ಈ ಹೇಳಿಕೆಯನ್ನ ನೀಡಿದ್ದೇನೆ. ಹಿಂದೆ ಬಿಜೆಪಿಯವರು ಸದಾಶಿವ ಆಯೋಗದ ವರದಿ ತಿರಸ್ಕರಿಸಿದರು ಮೀಸಲಾತಿ ಸಂಬಂಧಿಸಿದ ಪರ್ಸೇಂಟೇಜ್ ಅನ್ನು ದಹೆಲಿಗೆ ಕಳುಹಿಸಿದರು ಇದೇ ಗೊಂದಲ ವಿಚಾರವಾಗಿ ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಒಳಮೀಸಲಾತಿ ವಿಚಾರ ಉಪಚುನಾವಣೆ ಮೇಲೆ ಎಫೆಕ್ಟ್ ಆಗುತ್ತಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಒಳಮೀಸಲಾತಿ ಜಾರಿ ಮಾಡಲ್ಲ ಅಂತಾ ಏನಾದರೂ ಹೇಳಿದ್ದೀವಾ? ಒಳಮೀಸಲಾತಿ ಜಾರಿಗೆ ಬದ್ದ ಎಂದು ಹೇಳಿದ್ದೇನೆ. ವಿಶೇಷ ಸಂಪುಟ ಸಭೆ ಮುಂದೂಡಲಾಗಿದೆ. ಮುಂದಿನ ವಿಶೇಷ ಸಭೆ ಕರೆಯೋದು ಸಿಎಂಗೆ ಬಿಟ್ಟಿದ್ದು ಎಂದರು.

RELATED ARTICLES
- Advertisment -
Google search engine

Most Popular