ಕಲಬುರಗಿ : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ಕಷ್ಟ ಹೇಳಲು ಬಂದ ರೈತನ ಮೇಲೆ ಬಹಿರಂಗವಾಗಿಯೆ ಕಿಡಿಕಾರಿದ್ದಾರೆ.ಈ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ತೊಗರಿ ಹಾಳಾಗಿದೆ ಎಂದು ಕಷ್ಟ ಹೇಳಿಕೊಳ್ಳಲು ಬಂದ ರೈತನ ಮೇಲೆ ಮಲ್ಲಿಕಾರ್ಜುನ ಖರ್ಗೆ ಕೋಪಗೊಂಡಿದ್ದು, ಮೋದಿ ಮತ್ತು ಅಮಿತ್ ಶಾ ಅವರ ಬಳಿ ತೊಗರಿ ಕೇಳುಎಂದು ಹೇಳಿದ್ದಾರೆ. ಖರ್ಗೆ ಮಾತಿಗೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಿನ್ನದು 4 ಎಕರೆ, ನನ್ನದು 40 ಎಕರೆ ಹಾಳಾಗಿದೆ ಎಂದು AICC ಅಧ್ಯಕ್ಷರು ರೈತನಿಗೆ ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರೈತರ ಸಮಸ್ಯೆಗಳನ್ನು ಆಲಿಸುವ ಬದಲು, ಅವರನ್ನು ಕಡೆಗಣಿಸಿ ನೋಡಿದ್ದಾರೆ. ಇದು ಖರ್ಗೆ ದುರಹಂಕಾರ ಎಂದು ಹಲವರು ಕೋಪಗೊಂಡಿದ್ದರು.
ಭಾನುವಾರ ಕಲಬುರಗಿಗೆ ಬಂದಿದ್ದ ಖರ್ಗೆ, ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ, ರೈತ ಯುವಕನೊಬ್ಬ ಹಾಳಾದ ತೊಗರಿ ಬೆಳೆಯನ್ನು ತೋರಿಸಿ, ‘ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಹಾಳಾಗಿದೆ. ಇದಕ್ಕೆ ಕೋಪಗೊಂಡ ಖರ್ಗೆ ಇದೆಲ್ಲ ಶೋ ಬ್ಯಾಡ ಹೋಗು ಎಂದಿದ್ದರು. ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳೂ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಹೇಳಿಕೊಂಡು ಬರಬೇಡ. ಹೋಗಿ ಮೋದಿ, ಅಮಿತ್ ಶಾ ಬಳಿ ತೊಗರಿ ಕೇಳು ಎಂದು ಎಲ್ಲರೆದುರೆ ರೈತನಿಗೆ ಅವಮಾನ ಮಾಡಿದ್ದರು.
ಇನ್ನು, ಈ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿ, ಕಾಂಗ್ರೆಸ್‌ಗೆ ರೈತರು ಕೇವಲ ಭಾಷಣ ಮತ್ತು ಪ್ರಣಾಳಿಕೆಗಳಲ್ಲಿ ಮಾತ್ರ ಮುಖ್ಯವಾಗುತ್ತಾರೆ ಎಂದು ಆರೋಪಿಸಿದೆ. ಇದೇ ವೇಳೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿಸಿದೆ.
ಇದೇನಾ ನೀವು ರೈತರಿಗೆ ಕೊಡುವ ಗೌರವ? ಮೊನ್ನೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಿ ಎಂದು ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಡಿಸಿಎಂ ರೌಡಿಯಂತೆ ಧಮ್ಕಿ ಹಾಕಿದ್ದರು. ಇಂದು, ತೊಗರಿ ಬೆಳೆ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡ ರೈತನ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದರ್ಪ ತೋರಿದ್ದಾರೆ. ನಿನ್ನದು ನಾಲ್ಕು ಎಕರೆ ಅಷ್ಟೇ ತಾನೇ , ಹೋಗ್ ಹೋಗು ಎಂದು ರೈತರನ್ನು ಅಪಮಾನಿಸಿರುವುದು ತೀವ್ರ ಖಂಡನೀಯ. ಖರ್ಗೆ ಅವರೇ ನೀವು, ನಿಮ್ಮ ಕುಟುಂಬ ಹಲವು ದಶಕಗಳಿಂದ ರಾಜಕಾರಣದಲ್ಲಿದ್ದೀರಿ. ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿ, ಈಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದು. ನಿಮ್ಮ ಪುತ್ರ ಪ್ರಿಯಾಂಕ್ ಮಂತ್ರಿಯಾಗಿದ್ದಾರೆ. ಜಿಲ್ಲೆಯ ರೈತರ ಸಮಸ್ಯೆಗಳನ್ನು ಕೇಳುವ ತಾಳ್ಮೆ ಇಲ್ಲದಿದ್ದರೇ ಹೇಗೆ ? ನೊಂದವರಿಗೆ ನಷ್ಟ ಪರಿಹಾರ ಕೊಡಿಸಲು ಸಾಧ್ಯವಾಗದಿದ್ದರೇ ಏನು ಪ್ರಯೋಜನ ? ರೈತರೆಂದರೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಅಸಡ್ಡೆ ? ಈ ನಿಮ್ಮ ರೈತ ವಿರೋಧಿ ನಡೆಗೆ ಧಿಕ್ಕಾರ ವಿರಲಿ ” ಎಂದು ಕಿಡಿಕಾರಿದೆ.
ಬೆಳೆ ಹಾನಿಯಿಂದ ಕಂಗೆಟ್ಟು ಹೋದ ಯುವ ರೈತನೊಬ್ಬ ತಮ್ಮ ಬಳಿ ನೋವು ತೋಡಿಕೊಳ್ಳಲು ಬಂದಾಗ ‘ತೊಗರಿ ಬೇಳೆ ಹಾನಿಯಾಗಿದ್ದನ್ನು ನನ್ನಬಳಿ ತೋರಿಸಲು ಬಂದಿದ್ದೀಯಾ? ‘ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏರು ಧ್ವನಿಯಲ್ಲಿ ಗದರಿಸಿದ್ದಾರೆ
ಖರ್ಗೆ ಅವರ ಈ ನಡೆ ಅವರ ಹಿರಿತನ ಹಾಗೂ ಸುದೀರ್ಘ ರಾಜಕೀಯ ಅನುಭವದ ಘನತೆ ತಗ್ಗಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಅಹಂಕಾರವೇ ಮುಳ್ಳು ಎಂದು ಹೇಳುವ ಖರ್ಗೆಯವರು ನಿನ್ನೆ ಕಲಬುರ್ಗಿಯಲ್ಲಿ ಯುವ ರೈತನ ಮುಂದೆ ನಡೆದುಕೊಂಡಿರುವ ರೀತಿಯನ್ನು ಏನೆಂದು ವ್ಯಾಖ್ಯಾನಿಸಬೇಕು? ಯಾವ ಮುಳ್ಳು ಎಂದು ಹೇಳಬೇಕು?
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ರೈತನನ್ನು ಸಂಕಷ್ಟ ಪರಿಸ್ಥಿತಿಯಿಂದ ಮೇಲೆತ್ತುವ ಕೆಲಸವನ್ನು ಎಂದೂ ಮಾಡಲಿಲ್ಲ, ಬಡ ರೈತನ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಿದ್ದೇ ಹೆಚ್ಚು, ಅದು ಹೌದು ಎನ್ನುವುದಕ್ಕೆ ನಿನ್ನೆ ಅವರು ನಡೆದುಕೊಂಡಿರುವ ರೀತಿ ಸಾಕ್ಷಿ ಒದಗಿಸಿದೆ. ಮಾನ್ಯ ಖರ್ಗೆ ಅವರ ರೈತ ವಿರೋಧಿ ನಡೆಯನ್ನು ಕರ್ನಾಟಕ ಬಿಜೆಪಿ ಖಂಡಿಸುತ್ತದೆ. ಎಂದು ಆಕ್ರೋಶ ಹೊರಹಾಕಿದ್ದಾರೆ.