ಮಂಡ್ಯ: ಬಿಜೆಪಿ -ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಯಿಂದ ಸುಮಲತಾ ಅಂತರ ಕಾಯ್ದುಕೊಂಡಿದ್ದಾರಾ ಎನ್ನುವ ಪ್ರಶ್ನೆಯೊಂದು ಈಗ ಎಲ್ಲೆಡೆ ಉದ್ಭವವಾಗಿದೆ. ಅಲ್ಲದೆ ಅಂತಿಮ ದಿನದ ಪಾದಯಾತ್ರೆ ಎಲ್ಲಾದರೂ ಭಾಗಿಯಾಗುತ್ತಾರ ರೆಬೆಲ್ ಲೇಡಿ ಎಂದು ಕಾದು ನೋಡಬೇಕಾಗಿದೆ.
ಕಳೆದ 6 ದಿನದಿಂದ ಪಾದಯಾತ್ರೆಯಿಂದ ದೂರ ಉಳಿದಿರುವ ಸುಮಕ್ಕ. ಸ್ವಕ್ಷೇತ್ರ ಮಂಡ್ಯದಲ್ಲಿ ಪಾದಯಾತ್ರೆ ಸಾಗಿದ್ರೂ ಸುಮಲತಾ ಗೈರಾಗಿದ್ದರು.ಸುಮಲತಾ ನಡೆ ಮಂಡ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿಯಿಂದಲೇ ಸೈಡ್ಲೈನ್ ಆಗುತ್ತಿದ್ದಾರಾ ಮಾಜಿ ಸಂಸದೆ? ಅಥವಾ ರಾಜಕೀಯದಿಂದಲೇ ಅಂತರ ಕಾಯ್ದುಕೊಂಡ್ರಾ ಸುಮಲತಾ?….ಎನ್ನುವ ಅನುಮಾನವೊಂದು ಮೂಡಿದೆ.
ಮಂಡ್ಯದಿಂದಲೂ ದೂರ ದೂರ, ಪಕ್ಷದ ಕಾರ್ಯಕ್ರಮಗಳಿಂದಲೂ ಅಂತರ ಕಾಯ್ದುಕೊಳ್ಳುತ್ತಿರುವುದು.ಅಲ್ಲದೆ
ಸುಮಲತಾ ಸೈಲೆಂಟ್ ನಡೆಯಿಂದ ಬೆಂಬಲಿಗರಿಗೂ ಗೊಂದಲ ಉಂಟಾಗಿದೆ.
ಇಂದಿನ ಪಾದಯಾತ್ರೆಯಲ್ಲಿ ಭಾಗಿಯಾಗಿ ಎಲ್ಲಾ ಊಹಾಪೋಹಕ್ಕೆ ಬ್ರೇಕ್ ಹಾಕ್ತಾರಾ ಮಂಡ್ಯ ಗೌಡ್ತಿ?.ಎಂದು ಕಾದು ನೋಡಬೇಕಾಗಿದೆ.
ಇಂದು ಶ್ರೀರಂಗಪಟ್ಟಣದಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಶ್ರೀರಂಗನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಯಾತ್ರೆ ಆರಂಭವಾಗಲಿದೆ. ಕೇಂದ್ರ ಸಚಿವ ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ನಿಖಿಲ್ ಸೇರಿ ಹಲವು ನಾಯಕರು ಭಾಗಿ ಆಗುವರು.