Thursday, May 22, 2025
Google search engine

Homeರಾಜ್ಯಹರ್ಷ ಗೌಡ ಪಾಟೀಲ್ ಬಿಜೆಪಿ ಸೇರ್ಪಡೆಗೆ ಯತ್ನಾಳ್ ವ್ಯಂಗ್ಯ

ಹರ್ಷ ಗೌಡ ಪಾಟೀಲ್ ಬಿಜೆಪಿ ಸೇರ್ಪಡೆಗೆ ಯತ್ನಾಳ್ ವ್ಯಂಗ್ಯ

ವಿಜಯಪುರ: ಸಕ್ಕರೆ ಸಚಿವ ಶಿವಾನಂದ ಪಾಟೀಲ ಸಹೋದರನ ಪುತ್ರ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಹರ್ಷಗೌಡ ಅವರ ಇನ್ನೋರ್ವ ಚಿಕ್ಕಪ್ಪ ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಬಬಲೇಶ್ವರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಸಿದ್ದ ವಿಜುಗೌಡ ತಮ್ಮ ಸಹೋದರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಕೆ.ಬೆಳ್ಳುಬ್ಬಿ ಪರ ಮತ ಯಾಚನೆ ಮಾಡಲಿಲ್ಲ ಎಂದು ಕುಟುಕಿದರು.

ಒಂದೇ ಕುಟುಂಬದಲ್ಲಿ ಒಂದೇ ಮನೆಯಲ್ಲಿ ಒಂದೇ ಉದ್ಯೋಗ ಮಾಡುತ್ತಿದ್ದಾರೆ. ಒಬ್ಬರು ಕಾಂಗ್ರೆಸ್ ಪಕ್ಷದಲ್ಲಿ, ಇನ್ನೊಬ್ಬ ಬಿಜೆಪಿ ಪಕ್ಷದಲ್ಲಿ ಇದ್ದಾರೆ. ಪಕ್ಷದಿಂದ ಲಾಭ ಪಡೆಯಲು ಮಾತ್ರ ಇರುವ ಇಂಥವರಿಂದ ಪಕ್ಷಕ್ಕೆ ಯಾವ ಲಾಭವೂ ಇಲ್ಲ ಎಂದು ಹರಿಹಾಯ್ದರು.

RELATED ARTICLES
- Advertisment -
Google search engine

Most Popular