ಮೈಸೂರು: ಚಂದ್ರಯಾನ-3 ಯಶಸ್ಸಿಗಾಗಿ ಮೈಸೂರು ಬಿಜೆಪಿ ಮೈಸೂರು ಮಹಾನಗರ ಸದಸ್ಯರು ಮಂತ್ರಾಲಯ ರಾಯರ ಮೊರೆ ಹೋಗಿದ್ದಾರೆ.
ಚಂದ್ರಯಾನ ಯಶಸ್ವಿಗಾಗಿ ಶಾಸಕರಾದ ಶ್ರೀ ವತ್ಸ ನೇತೃತ್ವದಲ್ಲಿ ಬಿಜೆಪಿ ಸದಸ್ಯರಿಂದ ನಾಳೆ ಮಂತ್ರಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.

ಈ ಹಿನ್ನಲೆ ಇಂದು ಮೈಸೂರಿನಿಂದ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್ ನೇತೃತ್ವದಲ್ಲಿ 82 ಜನರ ಬಿಜೆಪಿ ಸದಸ್ಯರು ಮೈಸೂರು ರೈಲ್ವೆ ನಿಲ್ದಾಣದಿಂದ ಮಂತ್ರಾಲಯಕ್ಕೆ ಹೊರಟಿದ್ದಾರೆ.
ಭಾರತ್ ಮಾತಾಕೀ ಜೈ, ವಂದೇ ಮಾತರಂ ,ಇಸ್ರೋ ವಿಜ್ಞಾನಿಗಳಿಗೆ, ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿದ್ದಾರೆ.