ಮೈಸೂರು : ಧರ್ಮಸ್ಥಳ ಕೇಸ್ ನಲ್ಲಿ ರಾಜಕೀಯ ಸಂಘರ್ಷ ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ಜೋರಾಗಿದೆ.ಈ ನಡುವೆ ಸಿಎಂ ಸಿದ್ದರಾಮಯ್ಯ ಹಲವು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಮೈಸೂರಲ್ಲಿ ಮಾತಾಡಿದ ಅವರು ಹೋರಾಟ ಮಾಡಲು ಧರ್ಮಸ್ಥಳ ಪರ ಹೋರಾಟ ಮಾಡಲು ಬಿಜೆಪಿ ಅವರಿಗೆ ಹೊರದೇಶದಿಂದ ದುಡ್ಡು ಬಂದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಧರ್ಮಸ್ಥಳ ಯಾತ್ರೆ ವಿಚಾರವಾಗಿ ಬಿಜೆಪಿ ಅವರು ಮೊದಲೇ ಏಕೆ ಧರ್ಮಸ್ಥಳ ಯಾತ್ರೆ ಮಾಡಲಿಲ್ಲ? ವೀರೇಂದ್ರ ಹೆಗಡೆಯವರೇ ಎಸ್ಐಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಸತ್ಯ ಹೊರಗೆ ಬರಬೇಕು ಅಂತ ವೀರೇಂದ್ರ ಹೆಗ್ಗಡೆ ಅವರೇ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಇಷ್ಟೆಲ್ಲ ಮಾಡಬೇಕಾದರೆ ದುಡ್ಡು ಎಲ್ಲಿಂದ ಬಂದಿದೆ?.ಸೌಜನ್ಯ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವ ವಿಚಾರವಾಗಿ ಸಿಬಿಐ ಯಾರ ಕೈ ಕೆಳಗೆ ಇದೆ? ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಸೌಜನ್ಯ ಕುಟುಂಬಕ್ಕೆ ಬಿಟ್ಟಿದ್ದು. ಒಂದು ಕಡೆ ಬಿಜೆಪಿಯವರು ವೀರೇಂದ್ರ ಹೆಗ್ಗಡೆಗೆ ಜೈಕಾರ ಅಂತಾರೆ. ಮತ್ತೊಂದು ಕಡೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ನಾಯಕರಿಂದ ಚಾಮುಂಡಿ ಬೆಟ್ಟ ಚಲೋ ವಿಚಾರವಾಗಿ ಮಾತನಾಡಿದ, ಮಾಡುವವರು ಮಾಡಲಿ ಬಿಡಿ ನಾನು ಯಾವುದಕ್ಕೂ ಬೇಡ ಅನ್ನೋದಿಲ್ಲ. ಈ ಹಿಂದೆ ಮಿರ್ಜಾ ಇಸ್ಮಾಯಿಲ್ ಮಹಾರಾಜರ ಜೊತೆ ಅಂಬಾರಿ ಮೇಲೆ ಹೋಗಿದ್ದರು ಆಗ ಬಿಜೆಪಿಯವರು ಎಲ್ಲಿಗೆ ಹೋಗಿದ್ದರು? ಈ ಹಿಂದೆ ನಿಸಾರ್ ಅಹಮದ್ ಉದ್ಘಾಟನೆ ಮಾಡಿದ್ದರು ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು? ಬಾನು ಮುಷ್ತಾಕ್ ಕನ್ನಡದ ಸಾಹಿತಿ ಅರಿಶಿಣ ಕುಂಕುಮ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಕನ್ನಡದ ಮೇಲೆ ಪ್ರೀತಿ ಆಸಕ್ತಿ ಇಲ್ಲದೆ ಬರೆಯಲು ಸಾಧ್ಯನಾ? ಬೇರೆ ಧರ್ಮದವರು ಅರಿಶಿಣ ಕುಂಕುಮ ಹಾಕಿಕೊಳ್ಳಿ ಅಂದರೆ ಹೇಗೆ? ಅರಿಶಿನ ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿ ಇದೆಯ? ನೀವು ಹಿಂದೂಗಳಾಗಿ ಅಂದರೆ ಹೇಗೆ..? ಬಾನು ಮುಷ್ತಾಕ್ ವಿರುದ್ಧ ಯಾವುದೇ ಫತ್ವ ಹೊರಡಿಸಿಲ್ಲ ಈ ಬಗ್ಗೆ ಧರ್ಮ ಗುರುಗಳೆ ಸ್ಪಷ್ಟನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.