Sunday, January 4, 2026
Google search engine

Homeರಾಜಕೀಯಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್ ಕೊಲೆಗೆ ಬಿಜೆಪಿಯೇ ಕಾರಣ – ಡಿಕೆಶಿ

ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್ ಕೊಲೆಗೆ ಬಿಜೆಪಿಯೇ ಕಾರಣ – ಡಿಕೆಶಿ

ಬೆಂಗಳೂರು/ಬಳ್ಳಾರಿ: ನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ನೇರ ಆರೋಪ ಮಾಡಿದ್ದು, ನಮ್ಮ ಪಕ್ಷ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಪರ ನಿಲ್ಲಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನು ನಮ್ಮ ಶಾಸಕನ ಪರ ನಿಲ್ತೀನಿ ಎಂದು ಭರತ್ ರೆಡ್ಡಿ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಯಾರದ್ದೋ ಮನೆ ಮುಂದೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ರೆ ಎನು ಸಮಸ್ಯೆ? ನಮ್ಮ ಮನೆ ಮುಂದೆ, ಸಿಎಂ ಮನೆ ಮುಂದೆ ಬಿಜೆಪಿಯವರು ಬ್ಯಾನರ್ ಹಾಕುತ್ತಾರೆ. ಅದು ಸಾರ್ವಜನಿಕ ರಸ್ತೆ. ಸಂಭ್ರಮದಿಂದ ಕಾರ್ಯಕ್ರಮ ಮಾಡಲು ನಾವು ಬ್ಯಾನರ್ ಹಾಕಿದ್ದು ಅಷ್ಟೇ. ಈ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ ಇದಕ್ಕೆ ಬಿಜೆಪಿ ಕಾರಣ ಅಂತ ಆರೋಪ ಮಾಡಿದ್ದಾರೆ.

ಕಳೆದ ಲೋಕಸಭಾ, ವಿಧಾನಸಭೆಯ ಸೋಲನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ. ಬಳ್ಳಾರಿಗೆ ಜನಾರ್ದನ ರೆಡ್ಡಿ ಬರುವ ತನಕ ಒಂದು ಗಲಾಟೆ ಆಗಿರಲಿಲ್ಲ. ಈಗ ಶುರುವಾಗಿದೆ. ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು. ನಾನು ನಮ್ಮ ಶಾಸಕರ ಪರ ನಿಲ್ತೀನಿ ಎಂದು ಭರತ್ ರೆಡ್ಡಿ ಪರ ಮಾತನಾಡಿದ್ದಾರೆ.

ಬೆಂಕಿ ಹಚ್ಚುತ್ತಿದ್ದೆ ಅನ್ನೋ ಭರತ್ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಹೋಗ್ತಾರೆ ಬೆಂಕಿ ಹಚ್ಚಲು..? ಅವರು ಹೇಳಿದ್ದು ಗೊತ್ತಿಲ್ಲ ನೋಡ್ತೀನಿ ಎಂದು ಭರತ್ ರೆಡ್ಡಿ ಹೇಳಿಕೆಗೆ ಹಾರಿಕೆ ಉತ್ತರ ಕೊಟ್ಟರು. ಜನಾರ್ದನ ರೆಡ್ಡಿ ಕೊಲೆಗೆ ಸಂಚು ಅನ್ನೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲಾ ಸುಳ್ಳು. ಕೋಟೆ ಕಟ್ಟಿಕೊಂಡು ಕುಳಿತಿದ್ದಾರೆ. ಯಾರು ಕೊಲೆ ಮಾಡ್ತಾರೆ? ನೂರು ಜನ ಸೆಕ್ಯುರಿಟಿ ಇಟ್ಕೊಂಡಿದ್ದಾರೆ ಅದೆಲ್ಲಾ ಡ್ರಾಮಾ. ಜನರಿಗೆ ಇವರಿಂದ ಭಯ ಇದೆ ಅಂತ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಘಟನೆ ಬಳಿಕ ಶ್ರೀರಾಮುಲು ಕೂಡ ಫೋನ್‌ ಮಾಡಿದ್ರು. ಎಸ್‌ಪಿಗೆ ನಾನೇ ಮಾತಾಡಿದೆ. ನಮಗೂ ಜವಾಬ್ದಾರಿ ಇದೆ. ಒಬ್ಬ ಕೆಪಿಸಿಸಿ ಅಧ್ಯಕ್ಷ ಆಗಿಯೂ ಜವಾಬ್ದಾರಿ ಇದೆ ಎಂದರು. ನ್ಯಾಯಾಂಗ ತನಿಖೆಗೆ ಬಿಜೆಪಿ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ತನ್ನ ಕೆಲಸ ಮಾಡಲಿದೆ ಎಂದರು. ಗುಂಡು ಹಾರಿಸಿದ್ದು ಸರಿನಾ ಎಂಬ ಪ್ರಶ್ನೆಗೆ ತನಿಖೆ ಆಗ್ತಾ ಇದೆ ಉತ್ತರ ಸಿಗಲಿದೆ. ಅದಕ್ಕೆ ನಾವು ತನಿಖಾ ವರದಿ ಬರಲಿ ಎಂದು ಹೇಳಿರೋದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular