Saturday, May 24, 2025
Google search engine

Homeರಾಜ್ಯಹನುಮ ಧ್ವಜ ವಿಷಯವಾಗಿ ಕರೆ ನೀಡಿದ ಬಂದ್ ಗೆ ಬಿಜೆಪಿ ಬೆಂಬಲ: ಎನ್.ರವಿಕುಮಾರ್

ಹನುಮ ಧ್ವಜ ವಿಷಯವಾಗಿ ಕರೆ ನೀಡಿದ ಬಂದ್ ಗೆ ಬಿಜೆಪಿ ಬೆಂಬಲ: ಎನ್.ರವಿಕುಮಾರ್

ಹುಬ್ಬಳ್ಳಿ: ಮಂಡ್ಯ ಜಿಲ್ಲೆಯಲ್ಲಿ ಹನುಮ ಧ್ವಜ ವಿಷಯವಾಗಿ ಕರೆ ನೀಡಿದ ಬಂದ್ ನ್ನು ಬಿಜೆಪಿ ಬೆಂಬಲಿಸಲಿದೆ. ಹನುಮ ಧ್ವಜಕ್ಕೆ ಎಲ್ಲಿ ಅವಮಾನ ಆಗಿದೆಯೋ ಅಲ್ಲಿಯೇ ಸನ್ಮಾನವಾಗಬೇಕು ಎಂದು ವಿಧಾನಪರಿಷತ್ತು ಬಿಜೆಪಿ‌ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರಗೋಡ ಸ್ಥಳೀಯ ಸರ್ಕಾರ ಹನುಮ ಧ್ವಜ ಹಾರಿಸಲು ಅನುಮತಿ ನೀಡಿದರೆ, ರಾಜ್ಯ ಸರ್ಕಾರ ಧ್ವಜ ಕಿತ್ತು ಹಾಕುತ್ತದೆ. ಎಲ್ಲಿಯೇ ಆಗಲಿ ಕೋಮು ಸಂಘರ್ಷ ಸೃಷ್ಟಿಸುವ ಯಾವ ಕೆಲಸವನ್ನು ಬಿಜೆಪಿ‌ ಮಾಡುತ್ತಿಲ್ಲ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಯುಪಿಎ-ಎನ್ ಡಿಎ ಸರ್ಕಾರ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ‌ ಶ್ವೇತ ಪತ್ರ ಹೊರಡಿಸಲಿ. ಎನ್ ಡಿಎ ಸರ್ಕಾರದ ಅವಧಿಯಲ್ಲಿ‌ ಹೆಚ್ಚು ಅನುದಾನ ಬಂದಿದೆ ಎಂದಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು‌ ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು.

ಟೋಪಿ ಹಾಕಿಕೊಳ್ಳುವ ಸಿಎಂ‌ ಸಿದ್ದರಾಮಯ್ಯ ಅವರಿಗೆ ತಿಲಕ ಹಚ್ಚಿಕೊಳ್ಳಲು ಯಾಕೆ ಅಸಡ್ಡೆ ತೋರುತ್ತಿದ್ದಾರೆ ಎಂದು‌ ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಅನೇಕರಿಗೆ ತಲುಪಿಲ್ಲ ಎಂದು ಆರೋಪಿಸಿದರು.

RELATED ARTICLES
- Advertisment -
Google search engine

Most Popular