ಮೈಸೂರು: ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ವತಿಯಿಂದ ಬೋಗಾದಿಯ ರಾಜರಾಜೇಶ್ವರಿ ನಗರದ 80 ಅಡಿ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮದ ಶ್ರಮದಾನ ಮಾಡಲಾಯಿತು.
ಮುಖ್ಯ ರಸ್ತೆಯ ಒಂದು ಬದಿಯ ಪಾದಚಾರಿ ಮಾರ್ಗ ಗಿಡ ಗಂಟಿಗಳಿಂದ ಆವೃತವಾಗಿ, ಜನ ಎಸೆದಿದ್ದ ರಾಶಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿಹೋಗಿತ್ತು. ಇದನ್ನು ಗಮನಿಸಿದ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಸಂಸದ ಯದುವೀರ್ ಅವರ ಹುಟ್ಟುಹಬ್ಬದ ದಿನದಂದು ಶ್ರಮದಾನ ಮಾಡಿ ಸ್ವಚ್ಛಗೊಳಿಸಿದರು. ನಂತರ ಘೋಷಣೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ಸ್ವಚ್ಛ ಭಾರತದ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿದರು.
ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಶಿವು ಪಟೇಲ್, ಹೆಚ್.ಎಸ್. ಹಿರಿಯಣ್ಣ, ಕಾರ್ಯದರ್ಶಿಗಳಾದ ಪಿ. ಸೋಮಣ್ಣ, ರಾಚಪ್ಪಾಜಿ, ಎಸ್.ಟಿ. ಮೋರ್ಚಾ ನಗರ ಉಪಾಧ್ಯಕ್ಷ ಎಸ್. ತ್ಯಾಗರಾಜ್, ಎಸ್.ಸಿ. ಮೋರ್ಚಾ ನಗರ ಉಪಾಧ್ಯಕ್ಷ ಎನ್. ಪ್ರತಾಪ್, ಮಂಡಲದ ಮೋರ್ಚಾ ಪದಾಧಿಕಾರಿಗಳಾದ ಮಧು ಸೋಮಶೇಖರ್, ಜೆ.ರಂಗೇಶ್, ಚಂದನ್ ಗೌಡ, ಎಸ್. ಮಹೇಶ್ ಕುಮಾರ್, ರಾಘವೇಂದ್ರ, ಸಿ. ಲೋಕೇಶ್ ನಾಯಕ್, ಜೀವ ಗೌಡ, ಗೋಪಾಲ್ ಅಯ್ಯಂಗಾರ್, ಎ. ಎಂ. ಗಿರೀಶ್, ಬೂತ್ ಅಧ್ಯಕ್ಷರಾದ ಚೇತನ್, ಮಹೇಶ್ ಗೌಡ, ಜೀವನ್ ಭಾಗವಹಿಸಿದ್ದರು.



