ಮಂಡ್ಯ: ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ. ಇಷ್ಟು ವರ್ಷ ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದೇ ಅಪರಾಧ ಎಂಬುದಾಗಿ ಸಚಿವ ಎನ್ ಚಲುವರಾಯಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ನಾಯಕರು ಈಗ ಕಾನೂನಿನ ಕ್ರಮ ಆಗಬೇಕು ಅಂತಿದ್ದಾರೆ. ಹತ್ತಾರು ವರ್ಷದಿಂದ ಧರ್ಮಸ್ಥಳದ ಬಗ್ಗೆ ಅನೇಕರು ಮಾತನಾಡುತ್ತಿದ್ರು. ಆಗ ಬಿಜೆಪಿಯವರು ಎಲ್ಲಿ ಹೋಗಿದ್ರು ಎಂಬುದಾಗಿ ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲೇ ತನಿಖೆ ಮಾಡಿ ಕ್ರಮಕೈಗೊಳ್ಳಬೇಕಿತ್ತು. ಬಿಜೆಪಿ ಸರ್ಕಾರ ಇದ್ದಾಗ ನಾವು ಅವರ ಕೈಯನ್ನು ಹಿಡಿದುಕೊಂಡಿದ್ವ? ತಿರುಪತಿ ಬಿಟ್ಟರೇ ಧರ್ಮಸ್ಥಳಕ್ಕೆ ಅತ್ಯಂತ ಹೆಚ್ಚು ಭಕ್ತರು ಇದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ನಡುವಳಿಕೆಯೇ ಇದಕ್ಕೆಲ್ಲ ಕಾರಣ ಎಂದರು.
ನಾವು ಎಸ್ಐಟಿ ರಚಿಸಿದಾಗ ಯಾರೂ ಕೂಡ ಬೇಡ ಎನ್ನಲಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೂತಿದ್ದರು. ಎಸ್ಐಟಿ ರಚನೆ ಬಳಿಕ ಲಾಭ ಪಡೆಯಲು ಬಿಜೆಪಿ ಯತ್ನಿಸಿತು ಎಂಬುದಾಗಿ ಕಿಡಿಕಾರಿದರು.