Tuesday, July 8, 2025
Google search engine

Homeರಾಜ್ಯಸುದ್ದಿಜಾಲರಾಜ್ಯ ಸರಕಾರದ ಅವೈಜ್ಞಾನಿಕ ನೀತಿ ವಿರುದ್ಧ ಬಿಎಂಎಸ್ ಕಿಡಿ: ನಿಯಮ ಸಡಿಲಗೊಳಿಸದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ

ರಾಜ್ಯ ಸರಕಾರದ ಅವೈಜ್ಞಾನಿಕ ನೀತಿ ವಿರುದ್ಧ ಬಿಎಂಎಸ್ ಕಿಡಿ: ನಿಯಮ ಸಡಿಲಗೊಳಿಸದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ

ಮಂಗಳೂರು (ದಕ್ಷಿಣ ಕನ್ನಡ): ರಾಜ್ಯ ಸರಕಾರದ ಅವೈಜ್ಞಾನಿಕ ನೀತಿಯಿಂದ ಕಟ್ಟಡ ಕೆಲಸಕ್ಕೆ ಬೇಕಾದ ಮರಳು, ಕೆಂಪು ಕಲ್ಲು ಸಿಗದೆ ಕಟ್ಟಡದ ಕಾಮಗಾರಿಯು ನಡೆಯಿತ್ತಿಲ್ಲ ಇದರಿಂದಾಗಿ ಕಾರ್ಮಿಕರ ಬದುಕು ಅಂತತ್ರವಾಗಿದ್ದು ಕಾರ್ಮಿಕರು ಬೀದಿಗಿಳಿಯುವಂತೆ ಸರಕಾರ ಮಾಡಿದೆ ಇಂತಹ ಸರಕಾರಕ್ಕೆ ಬುದ್ದಿಕಲಿಸುವ ಕಾರ್ಯವನ್ನು ಕಾರ್ಮಿಕರು ಮಾಡುತ್ತಾರೆ. ಒಂದು ವಾರದೊಳಗೆ ನಿಯಮ ಸಡಿಲಗೊಳಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬಿ ಎಂ ಎಸ್ ನ ದ.ಕ ಜಿಲ್ಲಾ ಅದ್ಯಕ್ಷ ಅನಿಲ್ ಕುಮಾರ್ ಹೇಳಿದ್ದಾರೆ.

ಅವರು ಸೋಮವಾರ ಬೆಳ್ತಂಗಡಿ ಮಿನಿ ವಿದಾನ ಸೌದದ ಎದುರು ಬಿ ಎಂ ಎಸ್ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರು ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಬಿ ಎಂ ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ ಕಾರ್ಮಿಕ ಸಚಿವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಮರಳು , ಕೆಂಪುಕಲ್ಲು ಸಿಗದೆ ಕಾರ್ಮಿಕರ ಬದುಕು ನರಕಸದೃಶವಾಗಿದೆ ಇಂತಹ ಕಾರ್ಮಿಕ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ ಎಂದರು.

ತಕ್ಷಣ ಮರಳು, ಕೆಂಪುಕಲ್ಲಿನ ನಿಯಮ ಸಡಿಲಗೊಳಿಸಿ ಎಂದರು. ಕಳೆದ ಬಿಜೆಪಿ ಸರಕಾರ ಇರುವಾಗ ತಾಲೂಕಿಗೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ ಆದರೆ ಈಗಿನ ಸರ್ಕಾರ ಅದನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಅಸಂಘಟಿತ ಕಾರ್ಮಿಕ ಸಂಘಗಳ ಮುಖಂಡ ಅಶೋಕ್ ಮಾತನಾಡಿ ಅರೋಗ್ಯ, ಶಿಕ್ಷಣಕ್ಕೆ ಹಣ ಮೀಸಲಿಡದೆ ಅನಗತ್ಯ ಯೋಜನೆಗಳಿಗೆ ಹಣವನ್ನು ಸರಕಾರ ವ್ಯಯಮಾಡುತ್ತಿದೆ ಎಂದರು.

RELATED ARTICLES
- Advertisment -
Google search engine

Most Popular