Thursday, March 12, 2026
Google search engine

Homeರಾಜ್ಯಫಲ್ಗುಣಿ ನದಿ ನೀರಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ; ಕೊಳೆತ ಸ್ಥಿತಿಯಲ್ಲಿತ್ತು ಡೆಡ್ ಬಾಡಿ..!

ಫಲ್ಗುಣಿ ನದಿ ನೀರಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ; ಕೊಳೆತ ಸ್ಥಿತಿಯಲ್ಲಿತ್ತು ಡೆಡ್ ಬಾಡಿ..!

ಮಂಗಳೂರು
ಫಲ್ಗುಣಿ ನದಿ ತೀರದ ಅನ್ನೋಡಿ ಎಂಬಲ್ಲಿ ನೀರಿನಲ್ಲಿ ಸುಮಾರು 45-50 ವರ್ಷದ ಅಪರಿಚಿತ ಗಂಡಸಿನ ಮೃತದೇಹ ತೇಲುತ್ತಿದ್ದು, ಸುಮಾರು 7-8 ದಿನಗಳಿಂದ ನೀರಿನಲ್ಲಿ ಇದ್ದುದರಿಂದ ಮೃತದೇಹವು ಸಂಪೂರ್ಣ ಚರ್ಮ ಜಾರಿದ, ಕೊಳೆತು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತದೇಹದ ಕುತ್ತಿಗೆಗೆ ಶೂ ಲೇಸ್‍ನಿಂದ ಬಿಗಿದುಕೊಂಡು ಇನ್ನೊಂದು ತುದಿಯನ್ನು ಇಂಟರ್‍ಲಾಕ್ ಕಲ್ಲಿಗೆ ಬಿಗಿದು ಕಟ್ಟಿರುವುದು ಕಂಡು ಬಂದಿದ್ದು, ಚರ್ಮ ಕಿತ್ತು ಹೋಗಿರುವುದರಿಂದ ಮೃತದೇಹದ ಮೇಲೆ ಬೇರೆ ಗಾಯದ ಗುರುತುಗಳು ಕಂಡು ಬಂದಿರುವುದಿಲ್ಲ.
ಮೃತದೇಹದ ಚಹರೆ : ಎತ್ತರ ಸುಮಾರು 5.6 ಅಡಿ, ಕಪ್ಪು, ಮೆರೋನ್, ಗ್ರೇ ವಿವಿಧ ಬಣ್ಣಗಳಿರುವ ತುಂಬು ತೋಳಿನ ಚೆಕ್ಸ್ ಶರ್ಟ್, ಗ್ರೇ ಬಣ್ಣದ ಟ್ರ್ಯಾಕ್ ಪ್ಯಾಂಟ್, ಎಡಬದಿ ಕಿಸೆಯ ಪಕ್ಕದಲ್ಲಿ ಗಿ ಎಂಬ ಗುರುತು ಇರುತ್ತದೆ. ನೀಲಿ ಬಣ್ಣದ ಒಳಚಡ್ಡಿ, ಸಾಧಾರಣ ಶರೀರ, ತಲೆಯ ಮುಂಭಾಗ ತಲೆಕೂದಲು ಇರುವುದಿಲ್ಲ. ಹಿಂಬದಿ ಅಲ್ಲಲ್ಲಿ ಕೂದಲು ಇದ್ದು, ಸುಮಾರು 4 ಇಂಚು ಉದ್ದದ ಕೂದಲು ಇರುತ್ತದೆ. ಮೃತದೇಹದ ಬಲ ಕೈ ತಟ್ಟಿನಲ್ಲಿ ಶಿಲುಬೆ ಚಿಹ್ನೆ, ಲವ್ ಸಿಂಬಲ್ ಮತ್ತು ಅದರ ಒಳಗಡೆ ಆರ್ ಎಂದು ಬರೆದಿದ್ದು, ಇನ್ನೊಂದು ಅಕ್ಷರ ಸರಿಯಾಗಿ ಗೋಚರಿಸಿರುವುದಿಲ್ಲ. ಮೃತದೇಹದ ಗುರುತು ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular