Wednesday, August 6, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳದಲ್ಲಿ ಮೃತದೇಹ ಶೋಧ ಕಾರ್ಯಾಚರಣೆ: 11ನೇ ಗುರುತು ಸ್ಥಳದಲ್ಲಿ ಪತ್ತೆಯಾಗದ ಅಸ್ಥಿಪಂಜರ

ಧರ್ಮಸ್ಥಳದಲ್ಲಿ ಮೃತದೇಹ ಶೋಧ ಕಾರ್ಯಾಚರಣೆ: 11ನೇ ಗುರುತು ಸ್ಥಳದಲ್ಲಿ ಪತ್ತೆಯಾಗದ ಅಸ್ಥಿಪಂಜರ

ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಸಂಬಂಧ ಮೃತದೇಹಗಳ ಅವಶೇಷಗಳನ್ನು ಹುಡುಕುವ ಶೋಧ ಕಾರ್ಯಾಚರಣೆ ಇಂದು 11ನೇ ಗುರುತು ಮಾಡಿದ ಸ್ಥಳದಲ್ಲಿ ನಡೆಯಿತು.

ಎಸ್.ಐ.ಟಿ. ಅಧಿಕಾರಿಗಳು, ದೂರುದಾರ ಹಾಗೂ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಶೋಧ ನಡೆಸಿದರು. ಆದರೆ 11ನೇ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಇದೀಗ ಅಧಿಕಾರಿಗಳು 12ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅಲ್ಲಿ ಊಟದ ಬಳಿಕ ಶೋಧ ಕಾರ್ಯಾಚರಣೆ ಮುಂದುವರಿಸಲಾಯಿತು.

ಮೃತದೇಹ ಹೂತುಹಾಕಿದ ಆರೋಪಗಳ ಬಗ್ಗೆ ಮುಂದಿನ ಕ್ರಮಕ್ಕಾಗಿ ಪೊಲೀಸರು ಶ್ರದ್ಧೆಯಿಂದ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular