Saturday, June 7, 2025
Google search engine

HomeUncategorizedರಾಷ್ಟ್ರೀಯಆರ್ಥಿಕತೆಗೆ ಉತ್ತೇಜನ: ಆರ್‌ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತ, ಬಡ್ಡಿದರ ಶೇ. 5.50ಕ್ಕೆ...

ಆರ್ಥಿಕತೆಗೆ ಉತ್ತೇಜನ: ಆರ್‌ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತ, ಬಡ್ಡಿದರ ಶೇ. 5.50ಕ್ಕೆ ಇಳಿಕೆ

ನವದೆಹಲಿ: ಆರ್‌ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ.

ಎಂಪಿಸಿ ಸಭೆಯ ಈ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಆರ್‌ಬಿಐ ತನ್ನ ರಿಪೋ ದರವನ್ನು ಸತತ ಮೂರನೇ ಬಾರಿ ಇಳಿಕೆ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ರಿಪೋ ದರ ಶೇ. 6.50ರಷ್ಟಿತ್ತು. ಆರು ತಿಂಗಳ ಅವಧಿಯಲ್ಲಿ ಶೇ. 1ರಷ್ಟು ದರ ಇಳಿದಂತಾಗಿದೆ. ಈ ಹೊಸ ದರವು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರಿಪೋ ದರ ಇಳಿಸಲು ಪ್ರಮುಖ ಕಾರಣ ತಿಳಿಸಿದ್ದಾರೆ.
*ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಆರ್‌ಬಿಐಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿದೆ. ಜಾಗತಿಕ ಅನಿಶ್ಚಿತ ವಾತಾವರಣದಿಂದ ಹಿನ್ನಡೆಯಲ್ಲಿರುವ ಆರ್ಥಿಕತೆಗೆ ರಿಪೋ ದರ ಇಳಿಕೆಯು ಪುಷ್ಟಿ ಕೊಡುವ ನಿರೀಕ್ಷೆ ಇದೆ.
*ಆರ್‌ಬಿಐ ತನ್ನ ಮಾನಿಟರಿ ಪಾಲಿಸಿ ಸ್ಟ್ಯಾನ್ಸ್ ಅಥವಾ ಹಣಕಾಸು ನೀತಿ ನಿಲುವನ್ನು ಬದಲಾಯಿಸಿದೆ. ಅಕಾಮೊಡೇಟಿವ್ ಎಂದಿದ್ದ ನಿಲುವನ್ನು ನ್ಯೂಟ್ರಲ್‌ಗೆ ಬದಲಾಯಿಸಲಾಗಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ನೀತಿ ನಿಲುವನ್ನು ನ್ಯೂಟ್ರಲ್‌ನಿಂದ ಅಕಾಮೊಡೇಟಿವ್‌ಗೆ ಬದಲಾಯಿಸಲಾಗಿತ್ತು. ಈಗ ವಾಪಸ್ ನ್ಯೂಟ್ರಲ್ ನಿಲುವಿಗೆ ಬರಲಾಗಿದೆ.
*ಕ್ಯಾಷ್ ರಿಸರ್ವ್ ರೇಶಿಯೋವನ್ನು 100 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ 2.5 ಲಕ್ಷ ಕೋಟಿ ರೂ ಮೊತ್ತದ ಹಣದ ಹರಿವು ಆಗಲು ಸಾಧ್ಯವಾಗಲಿದೆ.

RELATED ARTICLES
- Advertisment -
Google search engine

Most Popular