ಈ ಬಾರಿಯ ಮೈಸೂರಿನ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬರಹಗಾರ್ತಿ ಬಾನು ಮುಫ್ತಾಕ್ ಅವರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ರಾಜಕೀಯ ರಂಗುಗೂಡುತ್ತಿದೆ. ಬಿಜೆಪಿ ಈ ವಿಷಯದಲ್ಲಿ ಹೋರಾಟ ಮಾಡುವುದಾಗಿ ಘೋಷಿಸಿದ್ದು, ವಿವಾದ ಮತ್ತಷ್ಟು ಗಂಭೀರವಾಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ, ಮುಸ್ತಾಕ್ ಅವರು ದಸರಾ ಉದ್ಘಾಟನೆಗೆ ಬರುವುದಾದರೆ ಹಿಂದೂ ಸಂಪ್ರದಾಯ ಅನುಸಾರ ಬನ್ನಿ ಎಂದು ತಿಳಿಸಿದ್ದಾರೆ. “ಸೀರೆ ಉಟ್ಟು, ಕುಂಕುಮ ಹಾಕಿ, ಮಲ್ಲಿಗೆ ಮುಡಿದು ಬನ್ನಿ, ನಮಗೆ ತೊಂದರೆ ಇಲ್ಲ,” ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಾನು ಮುಸ್ತಾಕ್ ಹಿಂದೂ ಸಂಸ್ಕೃತಿಯ ಬಗ್ಗೆ ಮಾಡಿದ ಹಿಂದಿನ ಹೇಳಿಕೆಗಳಿಗೂ ಟೀಕಿಸಿದ್ದಾರೆ. ಇಫ್ತಿಯಾರ್ ಕೂಟದ ಪ್ರಸ್ತಾಪ ತಂದ ಅವರು, ಧರ್ಮದ ಹೆಸರಲ್ಲಿ ವಿಭಜನೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಯು ರಾಜಕೀಯ ಧೋರಣೆಗೆ ತಿರುವು ಪಡೆದುಕೊಂಡಿದೆ.