ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಮುಸ್ಲಿಂ ಯುವಕ ಅಬ್ದುಲ್ ರಹ್ಮಾನ್ ಅವರ ಬರ್ಬರ ಹತ್ಯೆಗೆ ಪ್ರತಿಕ್ರಿಯೆಯಾಗಿ ಮಂಗಳೂರಿನಲ್ಲಿ ಅಘೋಷಿತ ಬಂದ್ ಉಂಟಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ರದ್ದುಪಡಿಸಲಾಗಿದೆ. ಸುರತ್ಕಲ್‌ನಲ್ಲಿ ಖಾಸಗಿ ಬಸ್ಸಿಗೆ ಕಲ್ಲೆಸೆತ ಹಾಗೂ ಬಿಸಿರೋಡ್ ಕೈಕಂಬ ಬಳಿ ಗುಂಪು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದೆ. ಇದರ ಪರಿಣಾಮವಾಗಿ ಬಿಸಿರೋಡ್ ಸುತ್ತಮುತ್ತ ಮೂರು ಗಂಟೆಗಳ ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಹುಡುಗನ ಅಂತಿಮ ದರ್ಶನಕ್ಕಾಗಿ ಭಾರೀ ಮಳೆಯನ್ನು ಲೆಕ್ಕಿಸದೇ ಸಾವಿರಾರು ಮಂದಿ ಆಗಮಿಸಿದರು. ಕೊಳತ್ತಮಜಲು ಗ್ರಾಮದವರಾಗಿದ್ದ ರಹ್ಮಾನ್ ಅವರ ಅಂತ್ಯಸಂಸ್ಕಾರ ಕೆಲವೇ ಹೊತ್ತಿನಲ್ಲಿ ನೆರವೇರಿಸಲಾಗುವುದು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ತೀವ್ರಗೊಂಡಿದ್ದು, ಘೋಷಣೆ ಕೂಗಿ ಪ್ರತಿಭಟನೆಯು ಉಂಟಾಗಿದೆ. ಘಟನೆ ನಡೆದರೂ ಜಿಲ್ಲಾಧಿಕಾರಿ ಹಾಗೂ ಗೃಹಸಚಿವ ಡಾ. ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಮುಸ್ಲಿಂ ಸಮುದಾಯ ಕಿಡಿಕಾರಿದೆ.