Sunday, January 25, 2026
Google search engine

HomeಅಪರಾಧBSNL ನೆಟ್‌ವರ್ಕ್‌ ಸಮಸ್ಯೆ: ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕರಿಗೆ ಪರಿಹಾರ ನೀಡಲು ಕಂಪೆನಿಗೆ ಗ್ರಾಹಕ ನ್ಯಾಯಾಲಯ ಆದೇಶ

BSNL ನೆಟ್‌ವರ್ಕ್‌ ಸಮಸ್ಯೆ: ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕರಿಗೆ ಪರಿಹಾರ ನೀಡಲು ಕಂಪೆನಿಗೆ ಗ್ರಾಹಕ ನ್ಯಾಯಾಲಯ ಆದೇಶ

ದೋಷಯುಕ್ತ 4G ನೆಟ್ವರ್ಕ್ ಒದಗಿಸಿದ್ದ BSNL ಕಂಪೆನಿಗೆ ದಂಡ ವಿಧಿಸಿ ಗ್ರಾಹಕನ ಪರ ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಘಟನೆಯ ವಿವರ ಇಂತಿದೆ:

ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಮಾಡಿಕೊ೦ಡಿರುವ ಯುವ ವಕೀಲರಾದ ತೇಜ ಕುಮಾರ್ ಡಿ.ಯಂ. ಅವರು BSNL ಕಂಪೆನಿಯ ಸಿಮ್ ನ್ನು 2014ರಿಂದ ಉಪಯೋಗಿಸುತ್ತಿದ್ದು, 2023 ರಿ೦ದ 4G ನೆಟ್ವರ್ಕ್ ಸಿಮ್ ಗೆ ವಿಸ್ತರಿಸಿದ್ದರು. ವಿಸ್ತರಿಸಿದ ಕೆಲವು ತಿಂಗಳು 4G ನೆಟ್ವರ್ಕ್ ಲಭ್ಯವಾಗಿತ್ತು. ತದನಂತರದಲ್ಲಿ
4G ನೆಟ್ ವರ್ಕ್ ಹಠಾತ್ ಆಗಿ ಸ್ಥಗಿತಗೊಳ್ಳುತ್ತಿತ್ತು. ಸ್ವಲ್ಪ ಸಮಯ ಕಳೆದ ಮತ್ತೆ ಬಿಟ್ಟು-ಬಿಟ್ಟು 4G ನೆಟ್ವರ್ಕ್ ಲಭ್ಯವಾಗಿತ್ತು. ಈ ಬಗ್ಗೆ ಗ್ರಾಹಕರು ಹಲವಾರು ಬಾರಿ ಸಂಸ್ಥೆಗೆ ದೂರು ನೀಡಿದ್ದರು.

ಆದರೆ, ಬಿಟ್ಟು-ಬಿಟ್ಟು ಬರುವ 4G ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಹಕರು ತೀವ್ರ ಸಮಸ್ಯೆಗೆ ಗುರಿಯಾಗಿದ್ದರು. ಸಮಸ್ಯೆಯನ್ನು ಸರಿಪಡಿಸಲು ಹಳೆಯ BSNL ಕಂಪೆನಿಯ ಸಿಮ್ ನ್ನು ಸಂಸ್ಥೆ ಯ ನಿರ್ದೇಶನದಂತೆ ಬದಾಲಾಯಿಸಿ ಹೊಸ 4G ನೆಟ್ವರ್ಕ್‌ ಸಿಮ್ ಅನ್ನೂ ಖರೀದಿಸಿದರು. ಹೊಸ ಸಿಮ್ ಕಾರ್ಡ್ ಖರೀದಿಸಿದರೂ ಕೂಡ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಾಹಕರು ಗ್ರಾಹಕರ ಪರಿಹಾರ ಆಯೋಗಕ್ಕೆ ಮೊರೆ ಹೋದರು. ತೇಜ ಕುಮಾರ್ ಡಿ.ಯಂ. ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ,BSNL ಸಂಸ್ಥೆಯು ನಿರಂತರವಾಗಿ ಗ್ರಾಹಕರಿಗೆ ನೀಡ ಬೇಕು, 4G ನೆಟ್ವರ್ಕ್ ಒದಗಿಸವಲ್ಲಿ ನ್ಯೂನ್ಯತೆ ತೋರಿದೆ ಎಂದು ತೀರ್ಪು ನೀಡಿತು.

ಪ್ರಮಾದ ಎಸಗಿದ BSNL ಸಂಸ್ಥೆಯು ಅನಿರ್ಬಂದಿತ 4G ನೆಟ್ವರ್ಕ್‌ ನ್ನೂ ನಿರಂತರವಾಗಿ ನೀಡಬೇಕು ಹಾಗು 4G ನೆಟ್ವರ್ಕ ರಿಚಾರ್ಜ್ ರೂ. 3880/-ನ್ನು ಶೇಕಡಾ 6ರ ಬಡ್ಡಿ ಮತ್ತು ಇದರ ಜೊತೆಗೆ ಸೇವಾ ನ್ಯೂನ್ಯತೆಗಾಗಿ ರೂ. 10,000/- ದಂಡ ಹಾಗೂ ಪ್ರಕರಣದ ವೆಚ್ಚವಾಗಿ ರೂ. 5000/-ವನ್ನು 65 ದಿನದೊಳಗೆ ಪಾವತಿಸಲು ಆದೇಶ ನೀಡಿದೆ.

ಮಂಗಳೂರಿನ ವಕೀಲರಾದ ತೇಜ ಕುಮಾರ್ ಡಿ.ಎಂ. ಅವರು ಸ್ವತಃ ದೂರುದಾರರಾಗಿ ವಾದ ಮಂಡಿಸಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular