ವರದಿ:ಎಡತೊರೆ ಮಹೇಶ್
ಎಚ್ ಡಿ ಕೋಟೆ: ಇತ್ತೀಚಿನ ಯುವ ಪೀಳಿಗೆ ಹೀರೋಗಳ ಅಭಿಮಾನಿಗಳಾಗುವುದರ ಜೊತೆಗೆ ತಮ್ಮ ಸ್ವಯಂ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಡಾ.ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ. ನಾಗರಾಜು ಯುವಕರಿಗೆ ಸಲಹೆ ನೀಡಿದರು.
ತಾಲೂಕಿನ ಭೋಗೇಶ್ವರ ಕಾಲೋನಿ ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್, ಸಿಹಿ ಹಂಚುವುದರ ಮೂಲಕ ಡೆವಿಲ್ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು
ನಂತರ ಮಾತನಾಡಿದ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಮಾಜಿ ಅಧ್ಯಕ್ಷ ಪಿ. ನಾಗರಾಜು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಲ್ಲಿದ್ದರೂ ಕೂಡ ಅಭಿಮಾನಿಗಳು ಡೆವಿಲ್ ಚಿತ್ರ ಯಶಸ್ವಿಯಾಗಲಿ ಎಂದು ಹಲವಾರು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ. ಅಭಿಮಾನ ಒಂದು ಕಡೆಯಾದರೆ ನಮಗೆ ಮೀಸಲಾತಿ ನೀಡಿದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರ ಜಯಂತಿಗಳನ್ನು ಗ್ರಾಮಗಳಲ್ಲಿ ಆಚರಣೆ ಮಾಡಬೇಕು.ಇತ್ತೀಚಿನ ದಿನಗಳಲ್ಲಿ ಯುವಕರು ದಾರಿ ತಪ್ಪುವ ಬದಲು ತಮ್ಮ ಬದುಕು ಕಟ್ಟಿಕೊಳ್ಳಿ ಶಿಕ್ಷಣವನ್ನು ಪಡೆದುಕೊಂಡು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಮುಖಂಡ ಸಿ. ಕಾಳಪ್ಪಾಜಿ ಮಾತನಾಡಿ, ದರ್ಶನ್ ಅವರ ಡೇವಿಲ್ ಚಿತ್ರ ನೂರು ದಿನ ಪೂರೈಸಲಿ ಎಂದು ಅಭಿಮಾನಿಗಳು ದರ್ಶನ್ ಅವರ ಹೆಸರಿನಲ್ಲಿ ಸರ್ಕಾರಿ ಶಾಲೆಗೆ ಪುಸ್ತಕ, ಪೆನ್ ಕೊಡುವುದರ ಮೂಲಕ ಚಿತ್ರದ ಯಶಸ್ವಿಗೆ ಸಾಮಾಜಿಕ ಕೆಲಸವನ್ನು ಮಾಡುತ್ತಿರುವುದು ಸಂತೋಷದ ವಿಷಯ ಚಿತ್ರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ಪುಟ್ಟಸ್ವಾಮಿ, ರಾಮಚಂದ್ರ, ಹನುಮಂತರಾಜು, ಚಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಾದ ಸಿದ್ದು, ರಘು, ಹನುಮಂತರಾಜು, ವಿಷಕಂಠ, ಹೇಮಂತ್, ಚೇತು, ಚಂದು, ಸಂತೋಷ್, ಕುಮಾರ್, ಗೋವಿಂದ್ ರಾಜ್, ಮಾದೇಶ್, ಆಕಾಶ, ರವಿನಂದನ್, ಷೇಟು, ಮನು, ಪ್ರೀತು, ಸಂತು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಯುವಕರು ಹಾಜರಿದ್ದರು.



