ಮಂಗಳೂರು (ದಕ್ಷಿಣ ಕನ್ನಡ): 1994 ರಲ್ಲಿ ನಾನು ಧರ್ಮಸ್ಥಳಕ್ಕೆ ಕೆಲಸಕ್ಕೆಂದು ಬಂದೆ. ನೇತ್ರಾವತಿ ಸ್ನಾನಘಟ್ಟದ ಹತ್ತಿರ ರೂಮ್ ಕೊಟ್ಟಿದ್ದರು. ನನ್ನ ಕೆಲಸ ಹೆಣಗಳನ್ನು ಹೂತು ಹಾಕುವುದಾಗಿತ್ತು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಹೆಣಗಳನ್ನು ಹೂತು ಹಾಕುತ್ತಿದ್ದೆ. ನಾನು ಪ್ರಾಣಭಯದಿಂದ ಊರು ಬಿಟ್ಟು ಹೋಗಿದ್ದೆ ಎಂದು ದೂರುದಾರ ಚಿನ್ನಯ್ಯ ವೀಡಿಯೋವೊಂದರಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಹೆಣಗಳನ್ನು ಹೂತು ಹಾಕದಿದ್ರೆ ಮನೆಗೆ ಬೀಗ ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಾ ಇದ್ದರು ಎಂದು ಹೇಳಿರುವ ಅವರು ಸೌಜನ್ಯ ಕೊಲೆಯಾದ ನಂತರ ನಾನು 2015 ರ ಸುಮಾರಿಗೆ ಧರ್ಮಸ್ಥಳ ತೊರೆದಿದ್ದೆ ಎಂದವರು ಹೇಳಿದ್ದಾರೆ.
ನಾನು ಹೂತಿರುವ ಅನೇಕ ಶವಗಳಲ್ಲಿ ಹೆಣ್ಮಕ್ಕಳದ್ದು ಜಾಸ್ತಿ ಇತ್ತು. ಹೆಚ್ಚಿನ ಶವಗಳಲ್ಲಿ ಒಳ ಉಡುಪುಗಳು ಇರ್ತಾ ಇರಲಿಲ್ಲ. ಮೃತದೇಹ ಸಿಕ್ಕಿದ ವೇಳೆ ಪೊಲೀಸರು ಬರ್ತಾ ಇರಲಿಲ್ಲ. ಶಾಲಾ ಬುಕ್, ಬ್ಯಾಗ್ ಗಳು ಹೆಣ್ಮಕ್ಕಳ ಮೃತದೇಹದ ಜೊತೆಗೆ ಸಿಕ್ತಾ ಇತ್ತು. ಇದನ್ನು ಶವದ ಜೊತೆಗೆ ಹೂತು ಹಾಕ್ತಾ ಇದ್ವಿ ಎಂದು ಚಿನ್ನಯ್ಯ ಹೇಳಿದ್ದಾರೆ. ನಮ್ಮನ್ನು ಕೊನೆಗೆ ಧರ್ಮಸ್ಥಳ ತೊರೆಯುವಾಗ ನಾವೇ ಹೋಗುತ್ತಿದ್ದೇವೆ ಎನ್ನುವ ಹಾಗೇ ಪತ್ರ ಬರೆಸಿಕೊಂಡಿದ್ದರು ಎಂದು ಚಿನ್ನಯ್ಯ ಹೇಳಿಕೊಂಡಿದ್ದಾರೆ.