Wednesday, March 25, 2026
Google search engine

Homeರಾಜ್ಯಉದ್ಯಮಿ ಸಿಜೆ ರಾಯ್ ಪ್ರಕರಣದಲ್ಲಿ ಹನಿಟ್ರ್ಯಾಪ್ ನೆರಳು

ಉದ್ಯಮಿ ಸಿಜೆ ರಾಯ್ ಪ್ರಕರಣದಲ್ಲಿ ಹನಿಟ್ರ್ಯಾಪ್ ನೆರಳು

ಬೆಂಗಳೂರು : ರಿಯಲ್‌ ಎಸ್ಟೇಟ್‌ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ದಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಸಿಜೆ ರಾಯ್‌ ಅವರನ್ನು ಸಿನಿಮಾ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಎಸ್ಐಟಿ ತನಿಖಾ ತಂಡದ ಮೂಲಗಳು ಹೇಳಿವೆ.

ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಸಿಜೆ ರಾಯ್ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡಿದ್ದರು. ಜನವರಿ 30 ರಂದು ಈ ಘಟನೆ ನಡೆದಿದ್ದು, ದೇಶಾದ್ಯಂತ ಈ ಘಟನೆ ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಐಟಿ ದಾಳಿ ಹಾಗೂ ಮಾನಸಿಕ ಹಿಂಸೆ ಆರೋಪವೂ ಕೇಳಿಬಂದಿತ್ತು. ಇದೀಗ ಎಸ್‌ಐಟಿ ತಂಡ ತನಿಖೆಯಲ್ಲಿ ಕೆಲ ಸ್ಫೋಟಕ ಸಾಕ್ಷ್ಯಗಳನ್ನು ಕಲೆ ಹಾಕಿದ್ದು, ಸಿಜೆ ರಾಯ್ ಆತ್ಮಹತ್ಯೆ ಅನ್ನೋದು ತನಿಖೆಯಲ್ಲಿ ದೃಢಪಟ್ಟಿದೆ.

ಇದೇ ವೇಳೆ ಸಿಜೆ ರಾಯ್‌ನನ್ನು ಹನಿಟ್ರ್ಯಾಪ್ ಮಾಡಿರುವುದು ಪತ್ತೆಯಾಗಿದೆ. ಸಿಜೆ ರಾಯ್ ಉದ್ಯಮದ ಹಲವು ಪ್ರಚಾರಗಳಲ್ಲಿ ನಟಿಯರು, ಮಾಡೆಲ್‌ಗಳನ್ನು ಬಳಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ಪ್ರಾಯೋಜಕತ್ವ ಸೇರಿದಂತೆ ಸೆಲೆಬ್ರೆಟಿಗಳ ಜೊತೆಗೂ ಉತ್ತಮ ನಂಟು ಹೊಂದಿದ್ದಾರೆ. ಇದರ ನಡುವೆ ಸಿನಿಮಾ ನಟಿಯೊಬ್ಬರು ಸೆಜೆ ರಾಯ್‌ ಅವರನ್ನು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ಸಿಜೆ ರಾಯ್‌ಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದು, ಈ ಕುರಿತು ಎಸ್ಐಟಿ ತನಿಖಾ ತಂಡ ತನಿಖೆ ನಡೆಸುತ್ತಿದೆ. ಸಿಜೆ ರಾಯ್ ಆತ್ಮಹತ್ಯೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ತನಿಖೆ ಮುಗಿಸಲು ಪೊಲೀಸ್ ತಂಡ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ತಂಡದ ವರದಿಗಾಗಿ ಕಾಯುತ್ತಿದೆ. ಸಿ‌ಜೆ.ರಾಯ್ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿರುವುದು ಸಾಬೀತಾಗಿದೆ. ಎಫ್ ಎಸ್ ಎಲ್ ವರದಿ ಹಾಗೂ ಸಾಂದರ್ಭಿಕ ಸಾಕ್ಷಿ ಆಧರಿಸಿ ವರದಿ ತಯಾರಿಸಲಾಗಿದೆ.

ಇದೀಗ ಸಿ.ಜೆ.ರಾಯ್ ಕೊನೆಯ ಕ್ಷಣಗಳಲ್ಲಿನ ಸೈಕಾಲಜಿ ಅಧ್ಯಯನ ಮಾಡಿ ನಿಮ್ಹಾನ್ಸ್ ವೈದ್ಯರು ವರದಿ ನೀಡಲಿದ್ದಾರೆ. ಈ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸಾಯುವ ಮುನ್ನ ಅವರ ಮನಸ್ಥಿತಿ ಹೇಗಿತ್ತು ಎಂಬ ಬಗ್ಗೆ ವೈದ್ಯರ ತಂಡ ಅಧ್ಯಯನ ನಡೆಸಿ ವರದಿ ನೀಡಲಿದೆ.

RELATED ARTICLES
- Advertisment -
Google search engine

Most Popular