Friday, December 19, 2025
Google search engine

Homeರಾಜ್ಯ ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ ಊಟ ಮಾಡೋದ್ರಲ್ಲಿ ತಪ್ಪೇನಿದೆ :...

 ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ ಊಟ ಮಾಡೋದ್ರಲ್ಲಿ ತಪ್ಪೇನಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ: ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ನನಗೇಕೆ ಅದೆಲ್ಲಾ? ಹೊರಗಡೆಯಿಂದ ಬಂದಿದ್ದೀವಿ. ಎಲ್ಲಾ ಸೇರಿರೋದ್ರಲ್ಲಿ, ಊಟ ಮಾಡೋದ್ರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮರುಪ್ರಶ್ನಿಸಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆದಿದೆಯಲ್ಲ ಎಂದು ಕೇಳಿದಾಗ ಡಿಸಿಎಂ ಈ ರೀತಿ ಉತ್ತರಿಸಿದರು. ಎಲ್ಲ ಸೇರಿ ಊಟ ಮಾಡೋದ್ರಲ್ಲಿ ತಪ್ಪು ಹುಡುಕಬೇಡಿ ಎಂದರು.

ಅಲ್ಲಿ ಬರೀ ನಾಲ್ಕೈದು ಜನ ಸೇರಿದ್ರಂತೆ ಎಂದು ಮಾಧ್ಯಮದವರು ಕೇಳಿದಾಗ, ಅದು ನನಗ್ಯಾಕೆ ಬೇಕು. ನನ್ನನ್ಯಾಕೆ ಈ ಪ್ರಶ್ನೆ ಕೇಳ್ತೀರಿ. ವಿಜಯೇಂದ್ರ ಅವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಟಾಂಗ್‌ ಕೊಟ್ಟರು.

ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡೋಣ. ಹೈಕಮಾಂಡ್‌ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಇದನ್ನು ಅವರು ಸಾಬೀತು ಮಾಡಬೇಕು. ಯಾವ ಲೆಕ್ಕಾಚಾರದ ಮೇಲೆ ಅವರು ಆರೋಪ ಮಾಡಿದ್ದಾರೆ. ಇಲ್ಲಿ ಸರ್ಕಾರನಾ ನಾವು ದಿವಾಳಿ ಮಾಡಿ ದುಡ್ಡು ತೆಗೆದುಕೊಂಡು ಹೋಗಿ ಹೈಕಮಾಂಡ್‌ಗೆ ಕೊಡುತ್ತಿದ್ದೇವೆ, ನಾವು ಹೈಕಮಾಂಡ್‌ಗೆ ಎಟಿಎಂ ಎಂದು ಹೇಳಿದ್ದಾರೆ. ಈಗ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ ಎಂದರು.

ರಾಜೇಂದ್ರ ಪ್ರಸಾದ್ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕತ್ತಿನ ಬಳಿ ನೋವಿದೆ. ಒಂದೆರಡು ದಿನ ವಿಶ್ರಾಂತಿ ಬೇಕು ಎಂದು ಹೇಳಿದ್ದಾರೆ. ತೀವ್ರವಾದ ತೊಂದರೆ ಉಂಟಾಗಿಲ್ಲ. ದೇವಿ ಯಲ್ಲಮ್ಮನೇ ಕಾಪಾಡಿದ್ದಾಳೆ ಎಂದರು.

ಒಬ್ಬ ಯುವಕನ ಸಾವಾಗಿದೆ. ಆತನ ಕುಟುಂಬದವರನ್ನು ಭೇಟಿ ಮಾಡಲು ಮಂತ್ರಿಗಳಿಗೆ ತಿಳಿಸುತ್ತೇನೆ. ನನಗೂ ಈ ಬಗ್ಗೆ ನೋವಿದೆ. ಮೃತಪಟ್ಟವನು ಇನ್ನೂ ಯುವಕ, ವಾಹನ ಚಾಲಕನಿಗೂ ಎದೆಯ ಬಳಿ ನೋವಾಗಿದೆ. ದೇವಸ್ಥಾನಕ್ಕೆ ತೆರಳಿ ಬರುವಾಗ ವಾಹನ ಅಡ್ಡ ಬಂದ ಕಾರಣಕ್ಕೆ ಈ ದುರ್ಘಟನೆ ನಡೆದಿದ್ದು, ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular