ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕರ್ತವ್ಯ ಮುಗಿಸಿ ಬೈಕ್ ನಲ್ಲಿ ಮನೆಗೆ ಹೋಗುವಾಗ ಎದುರಿನಿಂದ ಅತಿವೇಗದಿಂದ ಮೃತ್ಯುವಾಗಿ ಬಂದ ಕಾರೊಂದು ಬೈಕ್ ಡಿಕ್ಕಿ ಹೊಡೆದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದ್ದು ಮೃತ ಪಟ್ಟ ನೌಕರ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಡಿ.ಎಸ್.ಪ್ರಕಾಶ್ (58) ಎಂಬ ದುರ್ದೈವಿಯಾಗಿದ್ದಾರೆ. ಇವರಿಗೆ ಪತ್ನಿ, ಒರ್ವಪುತ್ರ, ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಎಂದಿನಂತೆ ಸಂಜೆ ಐದು ಗಂಟೆ ಸಮಯದಲ್ಲಿ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಮ್ಮ ಕರ್ತವ್ಯ ಮುಗಿಸಿ ತಮ್ಮ ಹೊಂಡಾ ಶೈನ್ ಬೈಕ್ ನಲ್ಲಿ ಕೆ.ಆರ್.ನಗರ ಪಟ್ಟಣದಲ್ಲಿರುವ ಮನೆಗೆ ಹೊರಟಿದ್ದಾರೆ, ಹಾಸನ- ಮೈಸೂರು ಹೆದ್ದಾರಿಯ ಬಡಕನಕೊಪ್ಪಲು ಗ್ರಾಮದ ಬಳಿ ಎದರುನಿಂದ ಅತಿವೇಗವಾಗಿ ಬರುತ್ತಿದ್ದ ಕಾರ್ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಭೈಕ್ ಸಮೇತ ಅನತಿ ದೂರ ಹಾರಿ ಹೋಗಿದ್ದಾರೆ, ತೀವ್ರ ಸ್ವರೂಪದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಅಂಬ್ಯೂಲೇನ್ಸ್ ಮೂಲಕ ಕೆ.ಆರ್.ನಗರದ ತಾಲ್ಲೂಕು ಆಸ್ಪತ್ರೆಗೆ ಕರತರಲಾಗಿದೆ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡುವ ವೇಳೆ ಮೃತಪಟ್ಟಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸ್ಸುದಾರರಿಗೆ ನೀಡಲಾಯಿತು. ಈ ಅಪಘಾತಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೋಲೀಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತರಾದರು ಎಂಬ ಸುದ್ದಿ ಕೆ.ಆರ್.ನಗರ ಮತ್ತು ಭೇರ್ಯ ಗ್ರಾಮದ ಎಲ್ಲೆಡೆ ಕಾಡ್ಗಿಚ್ಚು ನಂತೆ ಹರಡಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಕೆ.ಆರ್.ನಗರ ಪಟ್ಟಣದ ಆರ್ಕನಾಥ ರಸ್ತೆಯಲ್ಲಿರುವ ಮನೆಯಲ್ಲಿ ಇಡಲಾಗಿದ್ದು ಸಂಜೆ ಕಂಠೇನಹಳ್ಳಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಇವರ ನಿಧನಕ್ಕೆ ಶಾಸಕ.ಡಿ.ರವಿಶಂಕರ್, ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ, ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಮ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಜಿಲ್ಲಾಸ್ಪತ್ರೆಯ ಸೂಪರ್ , ವೈದ್ಯರಾದ ಡಾ.ಮಂಜುನಾಥ್, ಡಾ.ಸೌಜನ್ಯ, ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ತಾ.ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಪಾರ್ವತಿ, ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಂತಾಪ ಸೂಚಿಸಿದ್ದಾರೆ.