Monday, November 10, 2025
Google search engine

Homeಅಪರಾಧಮರಕ್ಕೆ ಕಾರು ಡಿಕ್ಕಿ: ಪಿಎಸ್‌ಐ ಸೇರಿ ಐವರಿಗೆ ಗಾಯ

ಮರಕ್ಕೆ ಕಾರು ಡಿಕ್ಕಿ: ಪಿಎಸ್‌ಐ ಸೇರಿ ಐವರಿಗೆ ಗಾಯ

ರಾಯಚೂರು : ದೇವದುರ್ಗದ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ರಾಯಚೂರು ತಾಲೂಕಿನ ಮುರಾನಪುರ ಬಳಿ ಅಪಘಾತಕ್ಕೀಡಾಗಿದ್ದು, ಐವರು ಗಾಯಗೊಂಡಿದ್ದಾರೆ.

ಭಾನುವಾರ (ನ.9) ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಿಎಸ್‌ಐ ಅರುಣ್ ಕುಮಾರ್ ರಾಥೋಡ್‌ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೂ ಗಾಯಗಳಾಗಿವೆ.

ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕೂಡ್ಲಿಗಿಯಲ್ಲಿ ಸಿಎಂ ಕಾರ್ಯಕ್ರಮದ ಬಂದೊಬಸ್ತ್‌ಗೆ ಪಿಎಸ್‌ಐ ತೆರಳಿದ್ದರು.

ವಾಪಸ್ ಮರಳುವಾಗ ಕುಟುಂಬದವರೊಂದಿಗೆ ಖಾಸಗಿ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದಿದೆ.

RELATED ARTICLES
- Advertisment -
Google search engine

Most Popular