Thursday, October 16, 2025
Google search engine

Homeಅಪರಾಧತಪ್ಪು ಸಂದೇಶದ ಆರೋಪ: ಹೋರಾಟಗಾರ ಜಯಂತ್.ಟಿ ವಿರುದ್ಧ ‌ಕೇಸ್

ತಪ್ಪು ಸಂದೇಶದ ಆರೋಪ: ಹೋರಾಟಗಾರ ಜಯಂತ್.ಟಿ ವಿರುದ್ಧ ‌ಕೇಸ್

ಮಂಗಳೂರು(ದಕ್ಷಿಣ ಕನ್ನಡ): ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ವಿಷಯದಲ್ಲಿ ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ಹೋರಾಟಗಾರ ಜಯಂತ್ ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಜಯಂತ್ ಟಿ ರವರು ಯೂಟ್ಯೂಬ್‌ನಲ್ಲಿ ಸತ್ಯಾಸತ್ಯತೆಯನ್ನು ತಿಳಿದಿದ್ದರೂ ಸಹ ಅಪೂರ್ಣವಾದ ಮಾಹಿತಿಯೊಂದಿಗೆ ಪೊಲೀಸ್ ಉಪಾಧಿಕ್ಷಕರು ಬಂಟ್ವಾಳ ರವರು ನಿಯಮನುಸಾರ ಕಾನೂನಾತ್ಮಕವಾಗಿ ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ಸಹಾಯಕ ಆಯುಕ್ತರು ಪುತ್ತೂರು ರವರಿಗೆ ಗಡಿಪಾರು ಪ್ರಸ್ತಾವನೆಯನ್ನು ಸಲ್ಲಿಸಿರುವುದನ್ನು ಸೌಜನ್ಯ ಪರ ಹೋರಾಟಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಿ ಸಂಬಂಧ ಕಲ್ಪಿಸಿ, ಇದೊಂದು ಷಡ್ಯಂತ್ರ ಎಂದು ಯೂಟ್ಯೂಬ್ನಲ್ಲಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಈ ಬಗ್ಗೆ ದಿನಾಂಕ 14/10/2025 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 118/2025 ಕಲಂ: 353(1)(b) ಬಿಎನ್ ಎಸ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular