Tuesday, May 20, 2025
Google search engine

Homeರಾಜ್ಯಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ: ಪುನೀತ್‌ ಕೆರೆಹಳ್ಳಿ ವಿರುದ್ಧ ದೂರು ದಾಖಲು

ಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ: ಪುನೀತ್‌ ಕೆರೆಹಳ್ಳಿ ವಿರುದ್ಧ ದೂರು ದಾಖಲು

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ ಮಾಡಿದ ಆರೋಪದಡಿ ರಾಷ್ಟ್ರರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್ ಐಆರ್‌ ದಾಖಲಾಗಿದೆ.

ರಣಧೀರ ಪಡೆ ಮುಖಂಡ ಬೈರಪ್ಪ ಹರೀಶ್‌ ಕುಮಾರ್‌ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ ಮಾಡಿ ಪುನೀತ್‌ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದುನ್ನು ದೂರಿನಲ್ಲಿ ಉಲ್ಲೇಖೀಸಿದೆ.

ಈ ಹಿಂದೆ ಕೊಲೆ ಕೇಸಿನಲ್ಲಿ ಪುನೀತ್‌ ಅವರ ಬಂಧನವಾಗಿತ್ತು. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾಧ್ಯಮದಲ್ಲಿ ಪ್ರಕಟವಾದ ವರದಿಯನ್ನು ತಮ್ಮ ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಅದಕ್ಕೆ ಪುನೀತ್‌ ತಮಗೆ ಜಾತಿ-ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಬೈರಪ್ಪ ಹರೀಶ್‌ ಕುಮಾರ್‌ ದೂರು ನೀಡಿದ್ದರು.

ಇತ್ತೀಚೆಗೆ ಪುನೀತ್‌ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಪುನೀತ್‌ ಹೈಕೋರ್ಟ್‌ ಗೆ ಹೋಗಿದ್ದರು.

RELATED ARTICLES
- Advertisment -
Google search engine

Most Popular