Tuesday, May 20, 2025
Google search engine

Homeರಾಜ್ಯಜಾತಿಗಣತಿ ವರದಿ: ಇಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಕ್ಕೆ ನಿರೀಕ್ಷೆ

ಜಾತಿಗಣತಿ ವರದಿ: ಇಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಕ್ಕೆ ನಿರೀಕ್ಷೆ

ಬೆಂಗಳೂರು : ಜಾತಿ ಗಣತಿ ವರದಿ ಜಾರಿ ಸಂಬಂಧ ಈಗಾಗಲೇ ಹಿಂದಿನ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿದ್ದು, ಹಲವು ಸಚಿವರು ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಬಳಿಕ ಏಪ್ರಿಲ್ 17ರಂದು ಅಂದರೆ ಇಂದು ರಾಜ್ಯ ಸರ್ಕಾರ ವಿಶೇಷ ಸಂಪುಟ ಸಭೆ ನಿಗದಿ ಮಾಡಿತ್ತು. ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದೆ.ಹಾಗಾಗಿ ಇಡೀ ರಾಜ್ಯದ ಜನತೆಯ ಚಿತ್ತ ರಾಜ್ಯ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದರ ಮೇಲಿದೆ.

ಈಗಾಗಲೇ ಈ ಒಂದು ಜಾತಿ ಗಣತಿ ವರದಿ ಜಾರಿ ಸಂಬಂಧ ಸ್ವಪಕ್ಷ ಕಾಂಗ್ರೆಸ್ ನಲ್ಲಿಯೇ ಹಲವು ಸಚಿವರು ಶಾಸಕರು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಾತಿ ಗಣತಿ ಅಂಕಿ ಅಂಶ ಕೂಡ ಕೆಲವು ದಿನಗಳ ಹಿಂದೆ ಬಹಿರಂಗವಾಗಿದ್ದು, ಮುಸ್ಲಿಮರು ಅತ್ಯಧಿಕ ಜನಸಂಖ್ಯೆ ಹೊಂದಿದ್ದಾರೆ ಎನ್ನಲಾಗಿದೆ.

ಜಾತಿಗಣತಿ ವರದಿ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಸತೀಶ್ ಜಾರಕಿಹೊಳಿ ಸೇರಿದಂತೆ ಇತರೆ ಸಚಿವರಿಂದ ಒತ್ತಾಯ ಕೇಳಿ ಬಂದಿದೆ.ಇಂದು ಕ್ಯಾಬಿನೆಟ್ ನಲ್ಲಿ ವಿಶೇಷ ಅಧಿವೇಶನಕ್ಕೆ ಒತ್ತಾಯ ಮಾಡುವ ಸಾಧ್ಯತೆ ಇದೆ. ಸದನದಲ್ಲಿ ಚರ್ಚೆಯಾದರೆ ಮುಕ್ತವಾದ ಮಾಹಿತಿ ಸಿಗುತ್ತದೆ. ಅಧಿವೇಶನದ ಮೂಲಕ ಜನರಿಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ.

ಸದನದಲ್ಲಿ ಚರ್ಚೆ ಆಗುವುದರಿಂದ ಗೊಂದಲಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಸದನದಲ್ಲಿ ಜಾತಿಗಣತಿ ವರದಿ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ. ಹಾಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ವಿಶೇಷ ಅಧಿವೇಶನ ಕರೆಯುವಂತೆ ಸಂಪುಟದಲ್ಲಿ ಒತ್ತಾಯ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇನ್ನು ಜಾತಿ ಗಣತಿ ವಿಚಾರ ಸಂಬಂಧ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಲಿಂಗಾಯತ ಸಮುದಾಯದ ಏಳು ಸಚಿವರಿದ್ದರೂ ಏನೂ ಮಾತನಾಡುತ್ತಿಲ್ಲ. ಅವರಿಗೆ ಕೆಪಾಸಿಟಿ ಇಲ್ಲ. ಹಾಗಾಗಿ, ಕೂಡಲೇ ರಾಜೀನಾಮೆ ನೀಡುವುದು ಸೂಕ್ತ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮುದಾಯದವರಿಗೆ ಅನ್ಯಾಯ ಆಗಿದೆ ಎಂದು ಬೇರೆ ಸಮುದಾಯದ ಶಾಸಕರು, ಸಚಿವರು ಸಭೆ ಕರೆಯುತ್ತಾರೆ. ಯಾವಲಿಂಗಾಯತ ಸಮಾಜದ ಸಚಿವರುಗಳು ಶಾಸಕರ ಸಭೆ ಕರೆದಿದ್ದಾರೆ. ಯಾವ ನೈತಿಕತೆ ಇವರಿಗಿದೆ, ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾಗಿ ಇಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಕುರಿತು ಸಿಎಂ ಸಿದ್ದರಾಮಯ್ಯವರ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.

RELATED ARTICLES
- Advertisment -
Google search engine

Most Popular