ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆ ಆನ್ ಲೈನ್ ಸೇವೆಗಳು ಜುಲೈ 25 ರಿಂದ 27ರವರೆಗೆ ಲಭ್ಯ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
ನಿಗದಿತ ದಿನಾಂಕಗಳಂದು ಸರ್ವರ್ ನಿರ್ವಹಣೆ ಇರುವುದರಿಂದ ಜುಲೈ 25ರಂದು ರಾತ್ರಿ 8:30 ರಿಂದ ಜುಲೈ 27ರಂದು ರಾತ್ರಿ 10 ಗಂಟೆಯವರೆಗೆ ಸೆಸ್ಕ್‌ನ ಆನ್ ಲೈನ್ ಸೇವೆಗಳಾದ ಆನ್ ಲೈನ್ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ನಗದು ಕೌಂಟರ್ ಹಾಗೂ ಇನ್ನಿತರೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
ಸೆಸ್ಕ್ ವ್ಯಾಪ್ತಿಯ ವಿ.ವಿ. ಮೊಹಲ್ಲಾ, ಹೂಟಗಳ್ಳಿ, ಕುವೆಂಪುನಗರ, ರಾಮಕೃಷ್ಣನಗರ, ಕೇಂದ್ರೀಯ ಉಪವಿಭಾಗ, ಚಾಮುಂಡಿಪುರಂ, ಎನ್.ಆರ್. ಮೊಹಲ್ಲಾ, ಜ್ಯೋತಿನಗರ, ನಂಜನಗೂಡು, ಕೆ.ಆರ್. ನಗರ, ಹುಣಸೂರು, ಚಾಮರಾಜನಗರ, ಕೊಳ್ಳೇಗಾಲ, ಮಡಿಕೇರಿ, ಮಂಡ್ಯ, ಮಳವಳ್ಳಿ, ಹಾಸನ, ಚನ್ನರಾಯಪಟ್ಟಣ ಮತ್ತು ಅರಸಿಕೆರೆ ವ್ಯಾಪ್ತಿಯ ಗ್ರಾಹಕರಿಗೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.